ನಾಮದೇವ ಶಿಂಪಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ

web2
ರಾಮದುರ್ಗದಲ್ಲಿ ಸಂತ ಶಿರೋಮಣಿ ನಾಮದೇವ ಸಿಂಪಿ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಉಲ್ಲಾಸರಾವ ರೇಣಕೆ, ಜೆ.ಎನ್. ಬಿಂಗೆ, ರಾಜು ಕೋಪರ್ಡೆ, ಸಿ.ವಿ. ಬಿಂಗೆ ಇತರರು ಇದ್ದರು.
Published on

ರಾಮದುರ್ಗ: ಸಂತ ಶಿರೋಮಣಿ ನಾಮದೇವ ಮಹಾರಾಜರ ಸಮಾಧಿ ಸಂಜೀವನ 673ನೇ ಸೋಹಳಾ ಕಾರ್ಯಕ್ರಮದ ಪ್ರಯುಕ್ತ ಸಂತ ಶಿರೋಮಣಿ ನಾಮದೇವ ಸಿಂಪಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಮದೇವ ಸಿಂಪಿ ಸಮುದಾಯದ ನೇತೃತ್ವದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಈಚೆಗೆ ಜರುಗಿತು.

ಸಮುದಾಯದ ಕಾರ್ಯದರ್ಶಿ ಉಲ್ಲಾಸರಾವ ರೇಣಕೆ ಮಾತನಾಡಿ, ಸರ್ಕಾರ ನಮ್ಮ ಬಡ ನಾಮದೇವ ಸಿಂಪಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವಂತೆ ಒತ್ತಾಯಿಸಿದರು.

ನಾಮದೇವ ಶಿಂಪಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಎನ್. ಬಿಂಗೆ, ನ್ಯಾಯವಾದಿ ರಾಜು ಕೋಪರ್ಡೆ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಅಂಕ ಗಳಿಸಿ ಸಮಾಜಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು. ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶಿಕ್ಷಕಿ ಸಿ.ವಿ. ಬಿಂಗೆ, ಯು.ಎನ್. ರೇಣಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net