ನಾಪೋಕ್ಲುವಿನಲ್ಲಿ ಮೇರಿ ಮಾತೆಯ ದಿನಾಚರಣೆ

9.npk-1
Published on

ನಾಪೋಕ್ಲು: ಸ್ಥಳೀಯ ಮೇರಿ ಮಾತೆ ದೇವಾಲಯದಲ್ಲಿ ಮೇರಿ ಮಾತೆಯ ದಿನವನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಪೂರ್ವ ಸಿದ್ಧತೆಯಲ್ಲಿ ಮಾತೆಗೆ ಒಂಬತ್ತು ದಿನದಿಂದ ನೋವೇನಾ ಪ್ರಾರ್ಥನೆ ಸಲ್ಲಿಸಿ ಕೊನೆಯ ದಿನದಂದು ಮೇರಿಮಾತೆಯನ್ನು ಪ್ರತಿಷ್ಠಾಪಿಸಿ ಜಪಸರ ಮತ್ತು ನೋವೇನಾ ಪ್ರಾರ್ಥನೆ, ಬಲಿ ಪೂಜೆ ನೆರವೇರಿಸಲಾಯಿತು. ಮಾತೆಯ ಹಾಡಿನೊಂದಿಗೆ ಕ್ರೈಸ್ತರು ಹಾಡಿ ಸಂಭ್ರಮಿಸಿದರು.

ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಮಾತನಾಡಿ, ಮೇರಿ ಮಾತೆಯ ಆದರ್ಶಗಳನ್ನು ಪಾಲಿಸಿ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು, ದೇವರನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸಿ ಎಂದ ಅವರು, ವೃದ್ಧ ತಂದೆ-ತಾಯಿಗಳ ಸೇವೆ ಮಾಡುವುದರೊಂದಿಗೆ ತನ್ನ ಮಕ್ಕಳನ್ನು ವಿಶ್ವಾಸದಲ್ಲಿ ಬೆಳೆಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು. ಪ್ರತಿಯೊಬ್ಬರೂ ಸುಸಂಸ್ಕೃತ ಮನೋಭಾವದೊಂದಿಗೆ ಉತ್ತಮ ಗುರಿಯನ್ನು ಬೆಳೆಸಿಕೊಳ್ಳಬೇಕೆಂದು ಶುಭ ಸಂದೇಶವನ್ನು ಸಾರಿ ಹಬ್ಬಕ್ಕೆ ಶುಭ ಹಾರೈಸಿದರು.

ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net