ನಾನು ಸನಾತನ ಹಿಂದು ಧರ್ಮ, ಸಂವಿಧಾನದ ನಾಯಿ

Published on

ಬಾಗಲಕೋಟೆ: ಬಿಜೆಪಿಯಲ್ಲಿ ಬೊಗಳೆಂದು ಶಾಸಕ ಯತ್ನಾಳ ಅವರನ್ನು ಇಟ್ಟುಕೊಂಡಿದ್ದಾರೆಂದು ಈಚೆಗೆ ಹೇಳಿಕೆ ನೀಡಿದ್ದ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಚಿವರ ಪ್ರತಿನಿಽಸುವ ಮುಧೋಳ ನಗರಕ್ಕೆ ಬಂದು ಬಹಿರಂಗವಾಗಿಯೇ ಖಡಕ್ ತಿರುಗೇಟು ಕೊಟ್ಟಿದ್ದಾರೆ.

ಮುಧೋಳ ನಗರದಲ್ಲಿ ಗುರುವಾರ ರಾತ್ರಿ ಜನತಾ ರಾಜ ಗಣೇಶ್ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ತೆರೆದ ವಾಹನದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಮಿಸ್ಟರ್ ಮಿನಿಸ್ಟರ್ ಬೊಗಳುವ ಪ್ರಾಣಿ ಎಂದರೆ ಅದು ನಾಯಿ. ನಿಯತ್ತು ಅಂದರೆ ನಾಯಿ. ಹೌದು, ನಾನು ಸನಾತನ ಹಿಂದು ಧರ್ಮದ ನಾಯಿ. ನಾನು ಭಾರತದ ಸಂವಿಧಾನದ ನಾಯಿ, ನಾನು ಭಾರತ ದೇಶದ ನಾಯಿ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಿ. ನಾನು ಯಾವ ಮಕ್ಕಳ ಜೊತೆ ಅಡ್ಜಸ್ಮೆಂಟ್ ಇಲ್ಲದ ಬಿಜೆಪಿ ನಾಯಿ. ನೀವು ಹಂದಿ ಜೊತೆ ಕೂಡಿ … ತಿನ್ನೋಕೆ ಹೋಗುತ್ತೀರಿ. ನನಗೆ ಬೊಗಳುತ್ತಾನೆ ಎನ್ನುತ್ತೀರಾ ಎಂದು ಸಚಿವ ತಿಮ್ಮಾಪುರ ಹೆಸರು ಹೇಳದೇ ಗುಡುಗಿದರು.

ಇನ್ನು ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದ ತೆಲಂಗಾಣದ ಶಾಸಕ ರಾಜಾಸಿಂಗ್ ಅವರಿಗೆ ಬಾಗಲಕೋಟೆ ಜಿಲ್ಲಾಡಳಿತ ೩ ತಿಂಗಳು ನಿರ್ಬಂಧ ಹಾಕಿದ್ದಕ್ಕೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ನೀವು ಅಽಕಾರಿಗಳು ಒಂದು ಪಕ್ಷದ ಏಜಂಟ್ ಆಗಬೇಡಿ. ಈ ದೇಶದ ಜನರು ತೆರಿಗೆ ಕಟ್ಟಿದ ಮೇಲೆ ನಿಮಗೆ ವೇತನ ಕೊಡುತ್ತಾರೆ. ತಿಮ್ಮಾಪುರ ಸಾಹೇಬರ ಮನೆಯಿಂದ ನಿಮಗೆ ಪಗಾರ ಕೊಡುವುದಿಲ್ಲ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳಿಗೆ ತಿವಿದರು.

ಇನ್ನು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಬಗ್ಗೆಯೂ ಅವಾಚ್ಯ ಪದಗಳಿಂದ ನಿಂಧಿಸಿದರು. ನಾನು ಮಾತನಾಡುವ ಭಾಷಣವನ್ನು ಪೂರ್ಣವಾಗಿ ರೆಕಾರ್ಡ್ ಮಾಡಿಕೊಳ್ಳಿ. ಟಿಪ್ಪು ಸುಲ್ತಾನ ಒಬ್ಬ ಹರಾಮ್ ಕೋರ ಸು….ಮಗ, ಔರಂಗಜೇಬ್ ಒಬ್ಬ ಹರಾಮ್ ಕೋರ ಸು…. ಮಗ. ಲಕ್ಷಾಂತರ ಹಿಂದುಗಳನ್ನು ಕೊಂದವ ಟಿಪ್ಪು ಸುಲ್ತಾನ್. ನನ್ನ ಮೇಲೆ ಎಷ್ಟು ಎ-ï‌ಐಆರ್ ಹಾಕುತ್ತೀರಿ ಹಾಕಿ. ಈಗಾಗಲೇ ನನ್ನ ಮೇಲೆ ೩೬ ರಿಂದ ೩೭ ಕೇಸ್ ಇವೆ. ಮುಧೋಳದಿಂದಲೂ ಸಹ ನಾಲ್ಕೈದು ಕೇಸ್ ಹಾಕುತ್ತೀರಾ ಹಾಕಿ. ಹಿಂದುಗಳೇನು ಷಂಡರಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net