ನಾನು ರಾಜೀನಾಮೆ ನೀಡಲ್ಲ ಎಲ್ಲದಕ್ಕೂ ಸಿದ್ಧ ಎಂದು ಚಂದ್ರೇಗೌಡ

1
Published on

ಹಾಸನ: ನಗರಸಭೆ ಅಧ್ಯಕ್ಷನಾಗಿ ಉತ್ತಮವಾಗಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ನನ್ನ ವಿರುದ್ಧ ಏನೇ ಮಾಡಿದರೂ ಅದನ್ನ ಎದುರಿಸಲು ನಾನು ಸಿದ್ದನಾಗಿದ್ದೇನೆ ಎಂದು ನಗರಸಭೆ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವಿಶ್ವಾಸ ಗೊತ್ತುವಳಿ ಹೀಗೆ ಮನವಿ ಮಾಡಿದ್ದರು ಆದರೆ ಕೆಲಸದ ಒತ್ತಡದಿಂದ ಕರೆಯಲಾಗಿಲ್ಲ ಎಲ್ಲಾ ಸದಸ್ಯರ ಬೆಂಬಲ ನನಗಿದೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೇಮಲತಾ ಅವರಿಗೂ ಕೂಡ ನಾನು ಸಹಕಾರ ನೀಡುತ್ತೇನೆ ಅದೇ ರೀತಿ ಅವರು ಕೂಡ ಸಹಕಾರ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net