ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದರೆ..

10
Published on

ಕಾಮನಬಿಲ್ಲು ೌಂಡೇಷನ್​ನಿಂದ ದಸೂಡಿ ಶಾಲೆಯಲ್ಲಿ ವಿನೂತನ ಭಾಷಣ ಸ್ಪರ್ಧೆ

ಹುಳಿಯಾರು: ಹೋಬಳಿಯ ದಸೂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹುಳಿಯಾರಿನ ಕಾಮನಬಿಲ್ಲು ೌಂಡೇಷನ್​ ವತಿಯಿಂದ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದರೆ ಎನ್ನುವ ವಿನೂತನ ಭಾಷಣ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರದ ವ್ಯಾಪ್ತಿ, ಗ್ರಾಮಾಭಿವೃದ್ಧಿಗೆ ಹಮ್ಮಿಕೊಳ್ಳಬಹುದಾದ ಯೋಜನೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಮಾತನಾಡಿದರು. ಅಲ್ಲದೆ ಗ್ರಾಪಂ ವ್ಯಾಪ್ತಿಗಳಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳ ಬಗ್ಗೆಯೂ ವಿದ್ಯಾರ್ಥಿಗಳು

ಭಾಷಣದಲ್ಲಿ ಬೆಳಕು ಚಲ್ಲಿದರು.

ನಾನು ಚುನಾವಣೆಯಲ್ಲಿ ದುಡ್ಡು ಕೊಟ್ಟು ಮತ ಹಾಕಿಸಿಕೊಂಡು ಗೆಲ್ಲುವುದಿಲ್ಲ. ಬದಲಾಗಿ ನನ್ನ ಸೇವಾ ಕಾರ್ಯಗಳನ್ನು ತೋರಿಸಿ ಮತಯಾಚಿಸುವೆ. ನಮ್ಮೂರಿಗೆ ಬಸ್​ ಸೌಕರ್ಯ ಇಲ್ಲದಾಗಿದ್ದು ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಡಿಪೋ ಮ್ಯಾನೇಜರ್​ ಗಮನ ಸೆಳೆದು ನಮ್ಮೂರಿಗೆ ಬಸ್​ ಬಿಡಿಸುವೆ, ನಮ್ಮೂರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಾಗಿದ್ದು, ಶಾಸಕರ ಗಮನಕ್ಕೆ ತಂದು ವೈದ್ಯರನ್ನು ನೇಮಕ ಮಾಡಿಸುವೆ, ಶಾಲೆಗೆ ನೀರು, ಲೈಟ್​, ಶಿಕ್ಷಕರು ಸೇರಿ ಮೂಲ ಸೌಕರ್ಯ ಕಲ್ಪಿಸುವೆ, ಸಮುದಾಯ ಭವನ ನಿಮಾರ್ಣ ಮಾಡಿ ಮದುವೆ ಸೇರಿ ಶುಭಕಾರ್ಯಗಳಿಗೆ ಅನುಕೂಲ ಮಾಡುವೆ, ಬೀದಿದೀಪ ಹಾಕಿಸುವೆ, ಚರಂಡಿ ಕ್ಲೀನ್​ ಮಾಡಿ ಫೆನಾಯಿಲ್​ ಹಾಕಿಸುವೆ ಹೀಗೆ ಅನೇಕ ವಿಷಯಗಳನ್ನು ಭಾಷಣದಲ್ಲಿ

ಪ್ರಸ್ತಾಪಿಸಿ ಗಮನ ಸೆಳೆದರು.

8ನೇ ತರಗತಿಯಲ್ಲಿ ಪ್ರೇರಣಾ (ಪ್ರ), ಮಾನಸಾ (ದ್ವಿ), ನಯನಾ (ತೃ), 9ನೇ ತರಗತಿಯಲ್ಲಿ ಅರುಣಾಕ್ಷಿ (ಪ್ರ), ವಿಕಾಸ್​ (ದ್ವಿ), ತೇಜಸ್ವಿನಿ (ತೃ), 10ನೇ ತರಗತಿಯಲ್ಲಿ ಸುಜಾತಾ (ಪ್ರ), ಲತಾ (ದ್ವಿ), ದೀಪಿಕಾ (ತೃ) ಬಹುಮಾನ ಪಡೆದರು. ಸಮಾಧಾನಕರ ಬಹುಮಾನಗಳನ್ನು ಲಿಖಿತಾ, ಜಯಂತ್​, ವಿಜಯ, ಪ್ರಶಾಂತ್​, ಕುಸುಮಾ, ಮೋಹನ್​, ದೀಕ್ಷಿತಾ, ಗಗನ, ದರ್ಶನ್​, ತಿಪ್ಪೇಸ್ವಾಮಿ, ಭೂಮಿಕಾ ಪಡೆದುಕೊಂಡರು.

ಗ್ರಾಪಂ ಉಪಾಧ್ಯಕ್ಷ ನಾಗರಾಜು, ಪಿಡಿಒ ಮುದ್ದಲಿಂಗಯ್ಯ, ಆಯರ್ವೇದ ವೈದ್ಯ ಡಾ.ಕೆ.ಆರ್​.ಬಸವರಾಜ ಪಂಡಿತ್​, ಗ್ರಾಹಕರ ವೇದಿಗೆ ರಾಜ್ಯ ಸಂಚಾಲಕ ಕಾರ್ಗಿಲ್​ ಸತೀಶ್​, ಮುಖ್ಯಶಿಕ್ಷಕ ರುದ್ರೇಶ್​, ಶಿಕ್ಷಕರಾದ ವಿಜಯಲಕ್ಷಿ$್ಮ, ಅಭಿಷೇಕ್​, ಶೇಖರಪ್ಪ, ಪ್ರಕಾಶ್​, ಚಂದ್ರಶೇಖರ್​ ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net