ನಾನಾ ಸಮುದಾಯ ಒಂದೆಡೆ ಸೇರಿಸಿದ ಮಹನೀಯ

30. HBH. 2
Published on

ಹಗರಿಬೊಮ್ಮನಹಳ್ಳಿ: ಕಾಯಕವೇ ಕೈಲಾಸ ಎಂದಿರುವ ವಿಶ್ವಗುರು ಬಸವಣ್ಣ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಸಲಹೆ ನೀಡಿದರು.

ಪಟ್ಟಣದ ಬಸವೇಶ್ವರ ಪುತ್ಥಳಿ ಬಳಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಬಸವಣ್ಣ ಅವರು ಜಾತಿಗಳ ನಿರ್ಮೂಲನೆಗಾಗಿ ಅನುಭವ ಮಂಟಪದ ಮೂಲಕ ಎಲ್ಲ ಸಮುದಾಯಗಳನ್ನು ಒಂದೆಡೆ ಸೇರಿಸಿದ ಮಹಾನ್ ವ್ಯಕ್ತಿ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಮೇ 8ರಂದು ಪಟ್ಟಣದಲ್ಲಿ ಬಸವ ಜಯಂತಿಯ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಹಸೀಲ್ದಾರ್ ಆರ್.ಕವಿತಾ, ಪಟ್ಟೇದ್ ಪ್ರಭಾವತಿ, ಪುಷ್ಪಾ ಬಸವರಡ್ಡಿ, ಪಂಕಜಾ, ಮಂಗಳಗೌರಿ, ಪುರಸಭೆ ಸದಸ್ಯ ನಾಗರಾಜ ಜನ್ನು, ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ, ಪ್ರಮುಖರಾದ ಕಿನ್ನಾಳ್ ಸುಭಾಷ್, ಎಚ್.ಎ.ಕೊಟ್ರೇಶ, ಸಂಚಿ ಶಿವಕುಮಾರ, ಟಿ.ಕೊಟ್ರೇಶ, ಅಕ್ಕಿ ಮಲ್ಲಿಕಾರ್ಜುನ, ವೀರಭದ್ರಯ್ಯ, ವಿಶ್ವನಾಥ, ಸತೀಶ, ಕೋರಿ ಪ್ರಕಾಶ, ತಾ.ಪಂ.ಇಒ ಡಾ.ಪರಮೇಶ್ವರಪ್ಪ, ತೋಟಗಾರಿಕೆ ಇಲಾಖೆಯ ಸಹಾಯಕಾಧಿಕಾರಿ ರಾಜೇಂದ್ರಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net