ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

CTD 9 STRIKE--02
Published on

ಚಿತ್ರದುರ್ಗ: ಕೇಂದ್ರ ಸರ್ಕಾರ ಕಾರ್ಮಿಕರ ಹಾಗೂ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಕನಿಷ್ಠ ವೇತನವನ್ನು ಮಾಸಿಕ 31500 ರೂ.ಗೆ ಹೆಚ್ಚಿಸಬೇಕು.ಲೇಬರ್ ಕೋಡ್ ರದ್ದು ಪಡಿಸಬೇಕು. ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾ ರಿಗೊಳಿಸಿ ಕನಿಷ್ಠ 8ಸಾವಿರ ರೂ.ಪಿಂಚಣಿ ನೀಡಬೇಕು. ನರೇಗಾ ದುಡಿಯುವ ದಿನಗಳನ್ನು 200ಕ್ಕೆ ಏರಿಸಬೇಕು.ಆಶಾ,ಅಂಗನವಾಡಿ ಮ ತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು.
ವಲಸೆ ಕಾರ್ಮಿಕರಿಗೆ ಸೇವಾಭದ್ರತೆ ಮತ್ತು ಪಡಿತರ ವ್ಯವಸ್ಥೆ ಜಾರಿ.ಹಮಾಲಿ ಕಾರ್ಮಿಕರು,ಬೀದಿ ಬದಿ ವ್ಯಾಪಾರಿಗಳು,ಚಿಂದಿಆಯು ವವರು,ಮನೆಗೆಲಸದವರು,ಮೆಕ್ಯಾನಿಕ್ ಹಾಗೂ ಟೈಲರ್‌ಗಳ ಕಲ್ಯಾಣ ಮಂಡಳಿ ಸ್ಥಾಪನೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು.
ಅಸಂಘಟಿತ ಹಮಾಲಿ ಕಾರ್ಮಿಕರಿಗೆ ನಿವೇಶನ ಹಂಚಿಕೆ,ಹೆಚ್ಚಿಸಿರುವ ಕೆಲಸದ ಅವಧಿ ಹಿಂಪಡೆಯುವುದು ಸೇರಿದಂತೆ ನಾನಾ ಬೇಡಿ ಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ,ಡಿ.ಎಂ.ಮಲಿಯಪ್ಪ, ಟಿ.ನಿಂಗಣ್ಣ,ನಿಂಗಮ್ಮ,ಇ.ನಾಗರಾಜು,ನಾಗರಾಜಾಚಾರಿ,ಬಿ.ಬೋರಮ್ಮ,ಎಚ್.ಒ.ನಾಗರಾಜ್,ಎಸ್.ರಾಜಣ್ಣ,ಶಶಿಕುಮಾರ್,ಶಿವಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net