

ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೂಡಲೇ ಶೈಕ್ಷಣಿಕ ಸಹಾಯಧನ ಮಂಜೂರು ಮಾಡುವುದು ಸೇರಿದಂತೆ ನಾನಾ ಬೇ ಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರ ದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ರಾಜ್ಯಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ 2021-22ನೇ ಸಾಲಿನಿಂದ ಈವರೆಗೆ ಸಹಾಯಧನ ಮಂಜೂರು ಮಾಡಿಲ್ಲ.ಆದ್ದರಿಂದ ತಕ್ಷಣ ಸಹಾಯಧನ ಮಂಜೂರು ಮಾಡಬೇಕು. ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು. ಹೆರಿಗೆಯಾದ ಕಾರ್ಮಿಕ ಮಹಿಳೆಯರಿಗೆ ತಾಯಿ ಮಗುವಿನ ಹೆಸರಿನಲ್ಲಿ ಬಾಂಡ್ ಹೊರತು ಪಡಿಸಿ ಪ್ರತ್ಯೇಕವಾಗಿ 60 ಸಾವಿರ ರೂ.ಸಹಾ ಯಧನ ನೀಡುವುದು.
ಪಿಂಚಣಿ ಮೊತ್ತವನ್ನು 5 ಸಾವಿರ ರೂ.ಗೆ ಹೆಚ್ಚಿಸುವುದು,ಕೆಲಸದ ವೇಳೆ ಅವಘಡಗಳಿಂದ ಕಾರ್ಮಿಕರು ಮರಣವಾದರೆ,ಅವರ ನೊಂದ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ಕೊಡುವುದು,ವಸತಿ ಸೌಲಭ್ಯ ಮತ್ತಿತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ,ನಾಗರಾಜ್,ಜಾವಿದ್‌ಬಾಷ,ಲಕ್ಷ್ಮೀದೇವಿ,ಅಶೋಕ್,ರಾಜು,ತಿಪ್ಪೇಸ್ವಾಮಿ,ಮನ್ಸೂರ್‌ಭಾಷ,ರಾ ಜು,ಸಂಚಾಲಕ ಈರೇಶ್ ಪಿ.ಕಲ್ಲಹಳ್ಳಿ,ಚಳ್ಳಕೆರಪ್ಪ,ನಾಗಭೂಷಣ,ಅಂಜಿನಪ್ಪ ಮತ್ತಿತರ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿದ್ದರು.