ನಾನಾ ಬೇಡಿಕೆಗಳ ಈಡೇರಿಕೆಗೆ ಪತ್ರಿಕಾ ವಿತರಕರ ಒತ್ತಾಯ

PHOTO-01-04
Published on


ಚಿತ್ರದುರ್ಗ: ದಿನಪತ್ರಿಕೆ ವಿತರಕರಿಗಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ/ಹಂಚಿಕೆದಾರರ ಸಂಘದ ಪದಾಧಿಕಾರಿಗಳು ಹಾಗು ಸದಸ್ಯರು ಬುಧವಾರ ಎಡಿಸಿ ಟಿ.ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಇವಿಎಂ ಬೈಕ್,ಮೊಪೆಡ್ ಖರೀದಿಸಲು ಪತ್ರಿಕಾ ವಿತರಕರಿಗೆ ಹೆಚ್ಚುವರಿ ಸಬ್ಸಿಡಿಯೊಂದಿಗೆ ಶೇ.ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒ ದಗಿಸ ಬೇಕು. ಪತ್ರಿಕಾ ವಿತರಕರು ಪತ್ರಿಕೆ ಹಂಚುವ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದಲ್ಲಿ ಚಿಕಿತ್ಸಾ ವೆಚ್ಚ ಭರಿಸಬೇಕು, ಮೃತಪಟ್ಟರೆ ನೊಂದ ಕುಟುಂ ಬದವರಿಗೆ 5 ಲಕ್ಷ ರೂ.ಪರಿಹಾರ ಸಹಾಯಧನ ನೀಡಬೇಕು.

ಪತ್ರಿಕಾ ವಿತರಕರ ಮಕ್ಕಳಿಗಾಗಿ ಉಚಿತ ಶಿಕ್ಷಣ ಸೌಲಭ್ಯ ಒದಗಿಸುವುದು. ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಹಾಯ ಧನ ಕೊಡಬೇಕು. 65 ವರ್ಷ ಮೀರಿದ ಪತ್ರಿಕಾ ವಿತರಕರಿಗೆ ಪಿಂಚಣಿ ಕೊಡಬೇಕು. ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ,ಕೆಂಪೇಗೌಡ ಪ್ರಶಸ್ತಿಗೆ ಪರಿಗಣಿಸ ಬೇಕು. ಆಶ್ರಯ ಯೋಜನೆಯಡಿ ಪತ್ರಿಕಾ ವಿತರಕರಿಗೂ ನಿವೇಶನಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದರು.

ಸಿಎಂ ಸಿದ್ದರಾಮಯ್ಯ ಮೊದಲ ಅವಧಿ,2018-19 ರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ 2 ಕೋಟಿ ರೂ.ಗಳನ್ನು ಹೆಚ್ಚಿಸಿ ವಿತಕರ ಕ್ಷೇಮಾಭಿವೃದ್ಧಿಗೆ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಎಡಿಸಿಗೆ ಮನವಿ ಸಲ್ಲಿಸಿ ದರು.

ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ,ಉಪಾಧ್ಯಕ್ಷ ಕುಬೇಂದ್ರಪ್ಪ,ಮೋಹನ್‌ಕುಮಾರ್,ಮಲ್ಲಿಕಾರ್ಜುನ್,ಆರ್.ಪ್ರಶಾಂತ್,ಕರಿಯಪ್ಪ,ನಾಗರಾಜ ಶೆಟ್ಟಿ,ತಿಪ್ಪೇಸ್ವಾಮಿ,ಜಿ.ಕರಿಬಸಪ್ಪ, ಸುನೀಲ್,ಮಂಜುನಾಥನಾಯ್ಡು,ಮಾರುತಿ,ತಿಪ್ಪೇಸ್ವಾಮಿ,ಮೈಲಾರಿ,ಓಂಕಾರಪ್ಪ,ದುಗ್ಗಪ್ಪ,ಚಂದ್ರಶೇಖರ್ ಇ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net