ನಾನಾ ಕ್ಷೇತ್ರಗಳ ಸಾಧಕರಿಂದ ಉನ್ನತ ಸ್ಥಾನ

15-SanduruP2
Published on

ಸಂಡೂರು: ದೇಶದ ಸ್ವಾತಂತ್ರೃಕ್ಕಾಗಿ ಅನೇಕ ಮಹನೀಯರು ಪ್ರಾಣ, ಆಸ್ತಿ ತ್ಯಾಗ ಮಾಡಿದ್ದು, ಅವರೆಲ್ಲರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದೇವೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.

ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕವಿಗಳು, ಸಾಹಿತಿಗಳು, ರೈತರು, ಯುವಕರು, ಮಹಿಳೆಯರು, ರಾಜಕಾರಣಿ, ಕ್ರೀಡಾಪಟುಗಳು ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ದಿದ್ದು ಅವರೆಲ್ಲರಿಗೂ ಶಿರಬಾಗಿ ನಮಿಸಬೇಕು. ಸ್ವಾತಂತ್ರ್ಯ, ನ್ಯಾಯ, ಧರ್ಮ, ಸಮಾನತೆ, ಸಹಿಷ್ಣುತೆ, ಜಾತ್ಯತೀತ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ದಕ್ಷಿಣ ಭಾರತದಲ್ಲಿ ಬಳ್ಳಾರಿ ಜಿಲ್ಲೆ ರಾಷ್ಟ್ರೀಯ ಚಳವಳಿಯ ತೊಟ್ಟಿಲೆಂದು ಪರಿಗಣಿಸಲಾಗಿತ್ತು ಎಂದರು.

ತಹಸೀಲ್ದಾರ್ ಜಿ.ಅನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ನಿವೃತ್ತ ಸೈನಿಕರು, ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ಸಂಸದ ಈ.ತುಕಾರಾಮ್, ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಮುಖ್ಯಾಧಿಕಾರಿ ಬಿ.ವಿನಾಯಕ ಗೌಡ, ಸಿಪಿಐ ಮಹೇಶ್‌ಗೌಡ, ಪುರಸಭೆ ಸದಸ್ಯರಾದ ವೀರೇಶ ಶಿಂಧೆ, ಎಲ್.ಎಚ್.ಶಿವಕುಮಾರ್, ಕೆ.ವಿ.ಸುರೇಶ್, ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net