ನಾಡು-ನುಡಿ ರಕ್ಷಣೆಗೆ ಕಟಿಬದ್ಧರಾಗಿ

ydg01
Published on

ಹುಣಸಗಿ (ಗ್ರಾಮೀಣ): ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಯೊಬ್ಬ ಕರ‍್ಯಕರ್ತರು ಕೂಡ ನಮ್ಮ ನಾಡು-ನುಡಿ ರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ತಾಲೂಕು ಅಧ್ಯಕ್ಷ ಬಸವರಾಜ ಚನ್ನೂರು ಹೇಳಿದರು.

ಇಲ್ಲಿನ ಸದಬ ಗ್ರಾಮದಲ್ಲಿ ಕರವೇ ನೂತನ ಗ್ರಾಮ ಘಟಕ ರಚನೆ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ರಕ್ಷಣೆ ಜತೆಗೆ ಸೇವೆಗೆ ಮುಂದಾಗಿ, ಅಲ್ಲದೆ ಗ್ರಾಮಗಳಲ್ಲಿನ ಜ್ವಲಂತ ಸಮಸ್ಯೆ ಕುರಿತು ಬೆಳಕು ಚಲ್ಲುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಸಂಘಟನೆ ಬೇರು ಮಟ್ಟದಿಂದ ಆರಂಭಿಸಿದಾಗ ಮಾತ್ರ ಗಟ್ಟಿಯಾಗಿರಲು ಸಾಧ್ಯ. ಈ ವೇದಿಕೆ ರಾಜ್ಯಾದ್ಯಂತ ಉತ್ತಮ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದರು.

ಈ ವೇಳೆ ಶಿವಲಿಂಗ ಪಟ್ಟಣಶೆಟ್ಟಿ, ಮೌನೇಶ ಚಿಂಚೋಳಿ, ರಾಜು ಅವರಾಧಿ, ರಾಜುಗೌಡ ಕುಪ್ಪಿ, ಸಿದ್ದು ಮಾಳನೂರ, ಸಿದ್ದನಗೌಡ ಯಕ್ತಾಪುರ, ಬಂದೇನವಾಜ ಯಾತನೂರ, ಶಿವನಗೌಡ ಸದಬ, ಸುಭಾನ್ ನಬೋಜಿ, ಸಿದ್ದನಗೌಡ ಹಳ್ಳಿ, ಅಸ್ಲಾಂ ತಾಳಿಕೋಟಿ, ಇಮ್ರಾನ್ ಚೌದ್ರಿ, ಪ್ರಶಾಂತ ನಾಯಕ, ಶಿವನಗೌಡ, ದೇವಣ್ಣ ಮುತ್ಯಾ, ಪರಶುರಾಮ ಚೌಧರಿ, ನಬಿ ಪಟೇಲ್, ನಿಂಗಪ್ಪ ಚೌದ್ರಿ, ಚಂದಪ್ಪ ಹಳಿಮನಿ ಇತರರಿದ್ದರು.


ನೂತನ ಪದಾಧಿಕಾರಿಗಳು: ನಂದಪ್ಪ ಪಿ.ಚೌದ್ರಿ (ಗೌರವಾಧ್ಯಕ್ಷ ), ಸಾಯಬಣ್ಣ ಚೌದ್ರಿ (ಅಧ್ಯಕ್ಷ ), ಮಲ್ಲು ದೇಸಾಯಿ, ಪ್ರಭುಗೌಡ ಪೊಲೀಸ್ ಪಾಟೀಲ್ (ಉಪಾಧ್ಯಕ್ಷರು), ದೇವೇಂದ್ರ ಚೌದ್ರಿ (ಪ್ರಧಾನ ಕಾರ್ಯದರ್ಶಿ), ಬಾಬುರಾವ್ ಚೌಧರಿ (ಸಹ ಕಾರ್ಯದರ್ಶಿ), ನಿಂಗಪ್ಪ ಮಾಗಣಗೇರಿ (ಸಂಚಾಲಕ), ಮಹೇಶ ನಾಯ್ಕೋಡಿ (ಸಂ. ಕಾರ್ಯದರ್ಶಿ), ಮಹೇಶ್ ಹಡಪದ (ಖಜಾಂಚಿ ), ಅಮೋಘಸಿದ್ದ ಪಿರಾಪುರ (ಸಹ ಸಂಚಾಲಕ), ರುಕುಂ ಪಟೇಲ್ (ಪ್ರಧಾನ ಸಂಚಾಲಕ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net