ನಾಡು ನುಡಿ ರಕ್ಷಣೆ ಎಲ್ಲರ ಕರ್ತವ್ಯ

1009KLB07
Published on

ಕಲಬುರಗಿ: ಕನ್ನಡ ನಾಡು-ನುಡಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ರ‍್ತವ್ಯ ಮುಖ್ಯ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಕನ್ನಡೋತ್ಸವ ನಿಮಿತ್ತ ಮಂಗಳವಾರ ರ‍್ಪಡಿಸಿದ್ದ ಸಮೂಹ ಚಿತ್ರಕಲಾ ಪ್ರರ‍್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯನ್ನು ಸಾಂಸತಿಕ ಜಿಲ್ಲೆಯನ್ನಾಗಿಸುವ ಸಾಧನೆಗೆ ರ‍್ವರೂ ಕೈಜೋಡಿಸಬೇಕು. ಕನ್ನಡೋತ್ಸವ ಆಚರಿಸುವ ಮೂಲಕ ನಾಡಿನ ಸಾಂಸತಿಕ ಮೌಲ್ಯ ಪಸರಿಸಿದಂತಾಗಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಭೀಮರಾವ ಟಿ.ಟಿ. ಮಾತನಾಡಿ, ಮೂರು ರ‍್ಷದಿಂದ ಕಲೆ, ಸಾಹಿತ್ಯ, ಸಂಗೀತ ಸೇರಿ ಇನ್ನಿತರ ಕ್ಷೇತ್ರಗಳು ಶ್ರೀಮಂತಗೊಳಿಸುವಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಶ್ರಮಿಸುತ್ತಿದೆ. ಜೀವ ಭಾವ ಒಂದಾಗಿಸಿ ಸರಿದೂಗಿಸಿ ಹಾಕುವ ಹೆಜ್ಜೆ ಗುರುತುಗಳು ನಾಡಿನ ಜನ ಮರೆಯಲಾಗದು. ಕನ್ನಡೋತ್ಸವವನ್ನು ನೆಲ-ಜಲ ಸಂರ‍್ಧನೆ ಸಂಕೇತವಾಗಿ ಆಚರಿಸಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಜಾತಿ, ರ‍್ಮಗಳ ಗೋಡೆಗಳಾಚೆ ಬಂಧುತ್ವದ ನೆಲೆಯಲ್ಲಿ ಕನ್ನಡ ಕಟ್ಟುವ ಪ್ರಾಮಾಣಿಕ ಕರ‍್ಯ ಪರಿಷತ್​ ಮಾಡುತ್ತಿದೆ. ಜಾತ್ಯತಿತ, ಧಮರ‍್ತೀತ ನಿಸ್ವರ‍್ಥ ಮನೋಭಾವದಿಂದ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ರ‍್ವ ಜನಾಂಗದ ಶಾಂತಿ ತೋಟದಲ್ಲಿ ಕನ್ನಡದ ಕಂಪು ಸೂಸುವಂತೆ ಮಾಡುತ್ತಿರುವ ಕರ‍್ಯಕ್ಕೆ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯ ೪೬ ಚಿತ್ರಕಲಾವಿದರ ಸಮಾಜಮುಖಿ ಚಿತ್ರಕಲೆಗಳು ಪ್ರೇಕ್ಷಕರ ಗಮನ ಸೆಳೆದವು. ವೈದ್ಯ ಡಾ.ಸಂಜೀವಕುಮಾರ ಎಂ.ವೈ.ಪಾಟೀಲ್​, ರ‍್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ಪಾಟೀಲ್​, ಪ್ರಮುಖರಾದ ಶರಣಗೌಡ ಎ.ಪಾಟೀಲ್​, ಡಾ.ರೆಹಮಾನ್​ ಪಟೇಲ್​, ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ ಮಾತನಾಡಿದರು. ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್​, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ್​, ರ‍್ಮರಾಜ ಜವಳಿ, ರಮೇಶ ಬಡಿಗೇರ, ಎಂ.ಎನ್​.ಸುಗಂಧಿ, ಶಿವಶರಣ ಹಡಪದ, ಸೈಯದ್​ ನಜಿರುದ್ದೀನ್​ ಮುತ್ತವಲಿ, ನವಾಬ ಖಾನ್​, ಅಮೃತಪ್ಪ ಅಣೂರ ಕವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net