ನಾಡಿದ್ದು ಸತೀಶ ಅವಾರ್ಡ್ ಕಾರ್ಯಕ್ರಮ

10Rayabag1
Published on

ರಾಯಬಾಗ: ಪ್ರಥಮ ಬಾರಿಗೆ ಸತೀಶ ಫೌಂಡೇಶನ್ ವತಿಯಿಂದ ಸತೀಶ ಅವಾರ್ಡ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಡಿ.14, 15ರಂದು ಸತೀಶ ಅವಾರ್ಡ್ ಕಾರ್ಯಕ್ರಮ ಮತ್ತು 16ರಂದು ಬಾಡಿ ಬಿಲ್ಡರ್ಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಶಿವು ಪಾಟೀಲ ಮಾತನಾಡಿ, ವಿವಿಧ ಶಾಲೆಗಳಿಂದ 800 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಪೋಷಕರು ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ರಾಯಬಾಗ ಘಟಕದ ಅಧ್ಯಕ್ಷ ಸಿದ್ದು ಬಂಡಗರ, ಹಾಜಿ ಮುಲ್ಲಾ, ಅರ್ಜುನ ಬಂಡಗರ, ಹರೀಶ ಕುಲಗುಡೆ, ದಿಲೀಪ ಜಮಾದಾರ, ಫಾರೂಕ್ ಮೊಮೀನ, ವಿವೇಕ ಹಟ್ಟಿಕರ, ಅಣ್ಣಾಸಾಹೇಬ ಸಮಾಜೆ, ಮಾರುತಿ ನಾಯಿಕ, ನಿರ್ಮಲಾ ಪಾಟೀಲ, ಶೈಲಜಾ ಕರಿಭೀಮಗೊಳ, ತನುಜಾ ಸಿಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net