

ಎಂ.ಕೆ.ಹುಬ್ಬಲ್ಳಿ: ಬೆಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜಗದ್ಗುರು ಸಿದ್ಧಾರೂಢ ಜಾತ್ರಾ ಮಹೋತ್ಸವ, ತೃತೀಯ ವರ್ಷದ ವೇದಾಂತ್ ಪರಿಷತ್, ಡಾ.ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ ಮತ್ತು ಕಿರೀಟ ಮಹಾಪೂಜೆ ಕಾರ್ಯಕ್ರಮವು ಮೇ 15ರಿಂದ ಮೇ 18ರ ವರೆಗೆ ಆಯೋಜಿಸಲಾಗಿದೆ ಎಂದು ಶ್ರೀಮಠದ ಅದ್ವೆ$ೃತಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ನೇಗಿನಹಾಳದ ಶ್ರೀಮಠದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂಚಲ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರತಿದಿನ ವಿಶೇಷ ಪೂಜೆ, ಅಭಿಷೇಕ, ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನಾಡಿನ ಪ್ರಮುಖರು ಪಾಲ್ಗೊಳ್ಳುವರು. 15ರಂದು ಬೆಳಗ್ಗೆ ಓಂಕಾರ ಪ್ರಣವಧ್ವಜಾರೋಹಣ, ಸಂಜೆ 6ರಿಂದ ಪೂಜ್ಯರಿಂದ ಉಪದೇಶಾಮೃತ ಕಾರ್ಯಕ್ರಮ ನಂತರ ಸಂಗೀತ, ಭಜನಾ ಮತ್ತು ಸತ್ಕಾರ ಸಮಾರಂಭ ನಡೆಯಲಿದೆ ಎಂದರು.
16ರಂದು ಸಂಜೆ 6ರಿಂದ ಪ್ರವಚನ, ನೀಲಮ್ಮ ದಿವಾಣದ ಹಾಗೂ ಮಕ್ಕಳಿಂದ ಇಂಚಲದ ಶಿವಾನಂದ ಭಾರತಿ ಸ್ವಾಮೀಜಿಗಳ ಕಿರೀಟ ಮಹಾಪೂಜೆ ಹಾಗೂ ತುಲಾಭಾರ ಸೇವೆ ನೆರವೇರಲಿದೆ. 17ರಂದು ಜಪಯ, ಕುಂಭೋತ್ಸವ, ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ಮೆರವಣಿಗೆ, ಪ್ರವಚನ, ಸತ್ಕಾರ ಹಾಗೂ ಅನ್ನಪ್ರಸಾದ, 18ರಂದು ರಾತ್ರಿ 8 ಗಂಟೆಗೆ ಕೌದಿ ಮಹಾಪೂಜೆ, ಅದ್ವೆ$ೃತಾನಂದ ಭಾರತಿ ಸ್ವಾಮೀಜಿಯಿಂದ ಪ್ರವಚನ ನಡೆಯಲಿದೆ ಎಂದರು.
ಗಂಗಪ್ಪ ಸಂಗೊಳ್ಳಿ, ಸತೀಶ ಕಾರಿಮನಿ, ಮಲ್ಲಯ್ಯ ಹಿರೇಮಠ, ರಾಮಣ್ಣ ತೋರಣಗಟ್ಟಿ, ರಾಚಪ್ಪ ಚಿನ್ನಪ್ಪಗೌಡ್ರ, ಮಹಾದೇವ ಮಡಿವಾಳರ, ಅಶೋಕ ಜೆನರ್, ಉಮೇಶ ಮಾರಿಹಾಳ, ವಿಠ್ಠಲ ಹಾರುಗೊಪ್ಪ, ಅಶೋಕ ಗಾಣಗಿ ಇತರರು ಇದ್ದರು.