ನಾಡಿದ್ದು ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಷೆ

bnk tejass
Published on

ಬಣಕಲ್: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿ.7ರಂದು ಪುಸ್ತಕ ಪರಿಷೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

7ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ವಿವಿಧ ಸಂವಾದಗಳು ನಡೆಯಲಿವೆ. ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದೆ. ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡಿಸಲಿದ್ದಾರೆ. ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರು ಪಾಲ್ಗೊಳ್ಳಬಹುದು.

ಸಾಮಾಜಿಕ ಜಾಲತಾಣ ಸೇರಿದಂತೆ ಬರಹದ ಹೊಸ ಮಾಧ್ಯಮ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಕ ಜವಾಬ್ದಾರಿ ಕುರಿತು ಸಂವಾದ ನಡೆಯಲಿದೆ. ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕರಾದ ಆರ್.ಜಿ.ನಾಗರಾಜ್, ಹರಿವು ಬುಕ್ಸ್ ಪ್ರಕಾಶಕ ಬಿ.ಆರ್.ರತೀಶ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ. ಬರಹದ ಹೊಸ ಮಾಧ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಪತ್ರಕರ್ತ ವಿಕಾಸ್ ನೇಗಿಲೋಣಿ, ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಘಟಕ ಕುನಾಲ್ ಕನ್ನಡಿಗ ಭಾಗವಹಿಸಲಿದ್ದಾರೆ. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕ ಜಯರಾಮಾಚಾರಿ ಭಾಗವಹಿಸಲಿದ್ದಾರೆ. ಪುಸ್ತಕ ಪರಿಷೆ ಕಾರ್ಯಕ್ರಮದಲ್ಲಿ 100 ಲೇಖಕರಿಗೆ ಮಾತ್ರ ಅವಕಾಶವಿದೆ. ಹೆಸರು ನೋಂದಾಯಿಸಿಕೊಳ್ಳಲು 8277589859, 9663098873 ಸಂಖ್ಯೆ ಸಂಪರ್ಕಿಸಬಹುದಾಗಿದೆ.

ಡಿ.8ರಂದು ದೇವರಮನೆಗೆ ಚಾರಣ ಆಯೋಜಿಸಲಾಗಿದೆ. ಅಕ್ಷರ ಪರಿಷೆ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದವರು ಮಾತ್ರ ಚಾರಣದಲ್ಲಿ ಭಾಗವಹಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net