ನಾಡಿಗೆ ಬಂದ ಪುನುಗು ಬೆಕ್ಕು ರಕ್ಷಣೆ

IMG-20250114-WA0027
Published on

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿಯ ಶ್ರೀಮಹದೇಶ್ವರ ದೇವಸ್ಥಾನದ ಬಳಿ ಮಂಗಳವಾರ ಕಾಣಿಸಿಕೊಂಡ ಪುನುಗು ಬೆಕ್ಕನ್ನು ಸ್ನೇಕ್ ಮಹೇಶ್ ಅವರು ರಕ್ಷಣೆ ಮಾಡಿದ್ದಾರೆ.

ಪುನುಗು ಬೆಕ್ಕು ಅಪರೂಪದ ಪ್ರಾಣಿಯಾಗಿದ್ದು, ಬೇರೆ ಯಾವುದೋ ಕಾಡುಪ್ರಾಣಿ ಅಟ್ಟಿಸಿಕೊಂಡು ಬಂದದ್ದರಿಂದ ದೇವಸ್ಥಾನದ ಬಳಿ ನಿತ್ರಾಣಗೊಂಡಿತ್ತು. ಸಂಕ್ರಾಂತಿ ಹ್ಬಬದ ಅಂಗವಾಗಿ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳು ಪುನುಗು ಬೆಕ್ಕನ್ನು ಗಮನಿಸಿ ಯಾವುದೋ ವಿಚಿತ್ರವಾದ ಕಾಡುಪ್ರಾಣಿ ಬಂದಿದೆ ಎಂದು ಕೆಲಕಾಲ ಭಯಭೀತಗೊಂಡಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ನೇಕ್ ಮಹೇಶ್ ಅವರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಅವರು ಪುನುಗು ಬೆಕ್ಕನ್ನು ಸಂರಕ್ಷಣೆ ಮಾಡಿದ್ದು, ಸುರಕ್ಷಿತ ಸ್ಥಳಕ್ಕೆ ಅದನ್ನು ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net