ನಾಡಿಗೆ ಬಂದ ಕಾಡು ಹಂದಿ ಸೆರೆ

30bkl2 (1)
Published on

ಭಟ್ಕಳ: ನಾಡಿಗೆ ಬಂದು ಗದ್ದಲವೆಬ್ಬಿಸಿದ 2 ಕಾಡು ಹಂದಿಗಳಲ್ಲಿ ಒಂದು ಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಹಿಡಿದಿದ್ದು, ಇನ್ನೊಂದು ಹಂದಿ ತಪ್ಪಿಸಿಕೊಂಡು ಒಡಿಹೋಗಿದೆ.

ಭಟ್ಕಳದ ನಡು ಪೇಟೆಗೆ ಆಗಮಿಸಿದ್ದ ಹಂದಿಗಳು ಅರ್ಬನ್ ಬ್ಯಾಂಕ್ ಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯೆಲ್ಲೆಲ್ಲಾ ಆವಂತರ ಸೃಷ್ಟಿಸಿದ ಹಂದಿಗಳನ್ನು ಒಡಿಸಲು ಮನೆಯವರು ಹರಸಾಹಸ ಪಟ್ಟಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಹಿಡಿದು ಒಂದು ಹಂದಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ ಮತ್ತವರ ತಂಡ ಕಾರ್ಯಾಚರಣೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net