ನಾಡಿಗೆ ಅನ್ಯಾಯವಾದರೆ ಹೋರಾಟಕ್ಕೆ ಸಿದ್ಧ

IMG-20221202-WA0072
ಹೊಸಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಜಯಶೀಲ ಕೃಷ್ಣಮೂರ್ತಿ, ಸದಸ್ಯರಾದ ಯೋಗೇಶ್, ಚಲುವರಾಜು, ಮುರಳಿಧರ್, ಲಕ್ಷ್ಮೀ, ನಂದಿನಿ ಇತರರಿದ್ದರು.
Published on

ಕೆ.ಆರ್.ಸಾಗರ: ಸಮೀಪದ ಪಿ.ಹೊಸಹಳ್ಳಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ, ಬಸ್ ತಂಗುದಾಣ, ಮಾರಮ್ಮನ ದೇವಸ್ಥಾನ ಹಾಗೂ ಸ್ಮಶಾನ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದರು.

ಮಹಾರಾಷ್ಟ್ರ ವಿನಾಃ ಕಾರಣ ಬೆಳಗಾವಿ ನಮಗೆ ಸೇರಬೇಕು ಎಂದು ಇಡೀ ವ್ಯವಸ್ಥೆಯನ್ನೇ ಹಾಳುಮಾಡುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೂ ಮೀರಿ ಮಹಾರಾಷ್ಟ್ರದವರು ವರ್ತಿಸಿದರೆ, ಪಕ್ಷಾತೀತವಾಗಿ ಯಾವುದೇ ಹೋರಾಟಕ್ಕೂ ಸಿದ್ಧ್ದ ಎಂದು ಎಚ್ಚರಿಸಿದರು.

ಸಂಸದೆ ಸುಮಲತಾ ಅವರ ಗೆಲುವಿಗೆ ಕಾಂಗ್ರೆಸ್ ಕಾರಣ. ಆದರೆ ಪ್ರಸುತ್ತ ತಮ್ಮ ಬೆಂಬಲಿಗರನ್ನ್ನು ಬಿಜೆಪಿಗೆ ಸೇರಿಸುವ ಮೂಲಕ ಕಾಂಗ್ರೆಸ್‌ಗೆ ದ್ರೋಹ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಪಾಠ ಕಲಿಯಬೇಕು. ಅಂಬರೀಷ್ ಅವರ ಅನುಕುಂಪದ ಮೇಲೆ ಜಯ ಸಾಧಿಸಿದ ಸುಮಲತಾ ಅವರಿಗೆ ಭವಿಷ್ಯದ ದಿನಗಳಲ್ಲಿ ರಾಜಕೀಯ ನೆಲೆ ಬೇಕು. ಆದ್ದರಿಂದ ಅವರಿಗೆ ಒಂದು ಪಕ್ಷ ಅವಶ್ಯಕತೆ ಇದೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಹಾಗೂ ರಮೇಶ್ ಬಾಬು ಬಂಡಿಸಿದ್ದೇಗೌಡ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರದ ಅಭ್ಯರ್ಥಿ ಕಣದಲ್ಲಿದ್ದರೂ ಪಕ್ಷದ ಸಿದ್ಧಾಂತ ಹಾಗೂ ಅಧ್ಯಕ್ಷರ ಸೂಚನೆ ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿದ್ದರು. ಆದರೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಜಯಶೀಲ ಕೃಷ್ಣಮೂರ್ತಿ, ಸದಸ್ಯರಾದ ಯೋಗೇಶ್, ಚಲುವರಾಜು, ಮುರಳೀಧರ್, ಲಕ್ಷ್ಮೀ, ನಂದಿನಿ, ಮಾಜಿ ಉಪಾಧ್ಯಕ್ಷ ಕೃಷ್ಣಾನಂದ್, ಮುಖಂಡರಾದ ವಾಸು, ವೆಂಕಟೇಶ್, ವಿವೇಕ್, ಉಮೇಶ್, ಪುಟ್ಟರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net