ನಾಡಪ್ರಭು ಕೆಂಪೇಗೌಡ ಸಮರ್ಥ ಆಡಳಿತಗಾರ,

CTD 27 KEMPEGWOADA--03
Published on

ಚಿತ್ರದುರ್ಗ: ನಾಡಪ್ರಭು ಕೆಂಪೇಗೌಡರು ಅಪೂರ್ವ ಕನಸುಗಾರ,ಸಮರ್ಥ ಆಡಳಿತಗಾರ ಹಾಗೂ ದೂರದೃಷ್ಟಿವುಳ್ಳ ನಾಯಕರಾಗಿದ್ದರು ಎಂದು ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತ ನಾಡಿದ ಅವರು,ಬೆಂಗಳೂರು ಸುತ್ತಮುತ್ತ ಕೃಷಿಗೆ ಆದ್ಯತೆ ನೀಡಿದ್ದರು. ಕೃಷಿಮತ್ತು ಕುಡಿವ ನೀರಿಗಾಗಿ ಕೆರೆ-ಕಟ್ಟೆ,ಕಲ್ಯಾಣಿಗಳನ್ನು ನಿರ್ಮಿಸಿದ್ದ ರು. ಹಲವು ಪೇಟೆಗಳನ್ನು ನಿರ್ಮಿಸಿ ವ್ಯಾಪಾರ,ವಹಿವಾಟು ಅಭಿವೃದ್ಧಿಗೂ ಶ್ರಮಿಸಿದ್ದರು. ಸರ್ವ ಧರ್ಮಗಳು,ಸಮುದಾಯಗಳನ್ನು ಒಳಗೊಂಡು,ಎಲ್ಲ ವೃತ್ತಿಗಳಿಗೂ ಆದ್ಯತೆ ಕೊಡುವ ಪರಿಕಲ್ಪನೆಯೊಂದಿಗೆ ನಾಡನ್ನು ಕಟ್ಟಿದ್ದರು,ದೇವಾಲಯುಗಳ ನಿರ್ಮಾಣ ಮಾಡಿದ್ದರು.

ಬೆಂಗಳೂರು ಜಾಗತಿಕ ಮಟ್ಟದದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ. ವಿಶ್ವಮಟ್ಟದಲ್ಲಿ ವ್ಯಾಪಾರ,ಐಟಿ,ಬಿಟಿ ಕೇಂದವಾಗಿದೆ. ವಿವಿಧ ವೃತ್ತಿಗಳಿಗೆ ಕ್ರಿಯಾಶೀಲ ಶಕ್ತಿ ಒದಗಿಸುವಂಥ ರೀತಿಯಲ್ಲಿ ಬೆಂಗಳೂರು ರೂಪಗೊಂಡಿದೆ. ಇಂಥ ಮಹಾನ್ ವ್ಯಕ್ತಿ ಕೆಂಪೇಗೌಡರ ಬಗ್ಗೆ ಯುವ ಜನರು ಅರಿ ತು ಕೊಳ್ಳಬೇಕು. ಸಾಧಕರು,ದಾರ್ಶನಿಕರ ಚಿಂತನೆಗಳು ಸಮಾಜಕ್ಕೆ ಪ್ರಸ್ತುತವಾಗಿವೆ ಎಂದರು.

ನಗರದ ಚಳ್ಳಕೆರೆ ಟೋಲ್‌ಗೇಟ್ ಬಳಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವಂತೆ ಜಿಲ್ಲಾ ಒಕ್ಕಲಿಗರ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ,ಕುಡಾ ಆಯುಕ್ತ ಸತ್ಯನಾರಾಯಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿ ಕಾರ್ಜುನ್,ನಗರಸಭೆ ವ್ಯವಸ್ಥಾಪಕಿ ಮಂಜುಳಾ,ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪ್ರೊ.ಎಸ್.ಈರಣ್ಣ,ಅಧ್ಯಕ್ಷ ಜಿ.ಪಿ.ಚೇತನ್, ಎಸ್.ಜಗ ನ್ನಾಥ್,ಜಿ.ಹನುಮಂತಪ್ಪ,ರಂಗದ್ಯಾಮಯ್ಯ,ಜಿ.ದ್ಯಾಮಪ್ಪ,ಆರ್.ಪರಮೇಶ್ವರ್,ಎಂ.ಡಿ.ಕುಮಾರ್,ಆರ್.ಚಿದಾನಂದಪ್ಪ, ಜಿ.ಎಂ. ಹನು ಮಂತಪ್ಪ,ಚೇತನ್,ಆರ್.ರವಿಕುಮಾರ್ ಹಾಗೂ ಅಧಿಕಾರಿಗಳಿದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಹೊಸ ದುರ್ಗದ ಮೂರ್ತಿ ತಂಡದವರು ಗೀತಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net