ನಾಟ್ಯಕಲಾ ತಂಡಕ್ಕೆ ಪ್ರಥಮ ಸ್ಥಾನ

4spt2
ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಮಂತರ್‌ಗೌಡ, ಅಪ್ಪಚ್ಚು ರಂಜನ್, ಉಮೇಶ್ ಇದ್ದರು.
Published on

ಸೋಮವಾರಪೇಟೆ: ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಈಚೆಗೆ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರಿನ ನಾಟ್ಯಕಲಾ ತಂಡ ಪ್ರಥಮ ಸ್ಥಾನ ಪಡೆಯಿತು.

ಸೋಮವಾರಪೇಟೆಯ ಎಡಿಸಿ ತಂಡ ದ್ವಿತೀಯ, ಅರ್ಜುನ್ ತಂಡ ತೃತೀಯ ಸ್ಥಾನ ಗಳಿಸಿದೆ. ಸೂಪರ್ ಟ್ರೋಫಿಯನ್ನು ರವಿ ವರ್ಮ ತಂಡ ಪಡೆದುಕೊಂಡಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ರವಿ ವರ್ಮ ತಂಡ ಪ್ರಥಮ, ಕ್ರಿಯೆಟಿವ್ ಅಕಾಡೆಮಿ ದ್ವಿತೀಯ, ಕೈಲಾಸ್ ಹಟ್ಟಿಹೊಳೆ ತೃತೀಯ, ಪ್ರೌಢ ಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ಮಸಗೋಡು ಚನ್ನಮ್ಮ ಶಾಲೆಯ ನಂದಗೋಕುಲ ತಂಡ ಪ್ರಥಮ, ಆದಿಶಕ್ತಿ ತಂಡ ದ್ವಿತೀಯ, ಭುವನೇಶ್ವರಿ ತಂಡ ತೃತೀಯ ಸ್ಥಾನ ಗಳಿಸಿದೆ. ಕಾಲೇಜು ವಿಭಾಗದಲ್ಲಿ ಅರ್ಜುನ್ ತಂಡ ಪ್ರಥಮ ಸ್ಥಾನ ಪಡೆದಿದೆ.

ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕಬಡ್ಡಿ ಪಂದ್ಯದಲ್ಲಿ ಸತೀಶ್ ತಂಡ ಪ್ರಥಮ, ಚಾಣುಕ್ಯ ತಂಡ ದ್ವಿತೀಯ, ಕ್ರಿಕೆಟ್‌ನಲ್ಲಿ ಕವನ್ ಪೂಜಾರಿ ತಂಡ ಪ್ರಥಮ, ಬಜೆಗುಂಡಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಡಾ.ಮಂತರ್‌ಗೌಡ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಬಹುಮಾನ ವಿತರಿಸಿದರು. ಮಂತರ್‌ಗೌಡ ಮಾತನಾಡಿ, ಕನ್ನಡ ಪರ ಹೋರಾಟದಲ್ಲಿ ಅಟೋ ಚಾಲಕರ ಕೊಡುಗೆ ಅಪಾರವಾದುದು. ಸದಾ ಸಾರ್ವಜನಿಕರಿಗೆ ಸೇವೆ ಒದಗಿಸುವ ಕೆಲಸವನ್ನು ಆಟೋ ಚಾಲಕರು ಮಾಡುತ್ತಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಪಟ್ಟಣದ ಹತ್ತಿರದಲ್ಲಿ ಪೈಸಾರಿ ಜಾಗ ಇರುವುದನ್ನು ಗುರುತಿಸಿ ತಿಳಿಸಿದರೆ ನಿವೇಶನ ಕಲ್ಪಿಸಲಾಗುವುದು ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಜಯ್ ಐಗೂರು, ಸಂಘದ ಸದಸ್ಯ ಲಿಂಗರಾಜು, ಟಿ.ಎಚ್.ಆಲಿಮಾ, ವಿದ್ಯಾರ್ಥಿ ಬಿ.ವಿ.ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಹರಪಳ್ಳಿ ರವೀಂದ್ರ, ತಾಕೇರಿ ಪದ್ಮನಾಭ, ಚೌಡ್ಲು ಗ್ರಾಪಂ ಅಧ್ಯಕ್ಷೆ ಗೀತಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಜೀವನ್, ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಶಶಿ, ಪ್ರಮುಖರಾದ ಬಿ.ಜೆ.ದೀಪಕ್, ಯೋಗೇಶ್, ಕಿಬ್ಬೆಟ್ಟ ಮಧು, ದೀಪಕ್, ಕೆ.ಎ.ಆದಂ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net