ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ

IMG-20241216-WA0051
Published on

*ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥಪ್ರಸನ್ನ ಅಭಿಪ್ರಾಯ

*ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಎಂ.ಪಿ.ರಾಜು ಅವರಿಗೆ ಸನ್ಮಾನ

ಚಾಮರಾಜನಗರ: ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ... ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು.

ನಗರದ ಡಾ. ರಾಜ್‌ ಕುಮಾರ್ ರಂಗಮಂದಿರದಲ್ಲಿ ಚೇತನ ಕಲಾವಾಹಿನಿ ಬೆಳ್ಳಿ ಮಹೋತ್ಸವದ ಅಂಗವಾಗಿ ಎಂ.ಪಿ.ರಾಜು ಅಭಿಮಾನಿ ಬಳಗದ ವತಿಯಿಂ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಪಿ.ರಾಜು ಅವರಿಗೆ ಅಭಿನಂದನೆ ಹಾಗೂ ದಕ್ಷಯಜ್ಞ ಪೌರಾಣಿಕ ನಾಟಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಧುನಿಕ ಭರಾಟೆಯಿಂದ ನಮ್ಮ ಸಂಸ್ಕೃತಿ ಪರಂಪರೆ ನಶಿಸಿ ಹೋಗು ಹೋಗುತ್ತಿರುವ ರಂಗಭೂಮಿ ಕಲೆ ಉಳಿಸಿ- ಬೆಳೆಸುವ ಜವಾಬ್ದಾರಿ ಕಲಾಪೇಕ್ಷಕ ಮೇಲಿದೆ. ಜಿಲ್ಲೆಯಲ್ಲಿ ರಂಗಭೂಮಿ ಕಲೆಯನ್ನು ಜೀವಂತ ಉಳಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಜಿಲ್ಲೆಯು ಜಾನಪದ ಕಲೆ ತವರೂರಾಗಿದ್ದು, ರಂಗಕಲೆ ಹೆಚ್ಚು ಒತ್ತು ನೀಡಿದೆ. ಹೆಚ್ಚಿನ ಮಟ್ಟದಲ್ಲಿ ಡಾ. ರಾಜ್‌ ಕುಮಾ‌ರ್ ರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನವಾಗುತ್ತಿವೆ ಎಂದರು.

ಜಿಲ್ಲೆಗೆ ಸಂದ ಗೌರವ: ಎಂ.ಪಿ.ರಾಜು ಅವರ ನಾಟಕ ಸೇವೆಯನ್ನು ಸರ್ಕಾರ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲೆಯ ರಂಗಭೂಮಿಗೆ ದೊರೆತ ದೊಡ್ಡ ಗೌರವವಾಗಿದ್ದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು. ಅವರ ನಾಟಕ ಸೇವೆಗೆ ಮತ್ತಷ್ಟು ಪ್ರಶಸ್ತಿ ಲಭಿಸಲಿ ಎಂದು ಆಶಿಸಿದರು.

ನಗರದ ಶ್ರೀಸಿದ್ದ ಮಲ್ಲೇಶ್ವರ ವಿರಕ ಮಠದ ಮಠಾಧ್ಯಕ್ಷರಾದ ಚೆನ್ನಬಸವಸ್ವಾಮಿಜೀ.. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾಡಿನಾಡಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಪಿ.ರಾಜು ಅವರು ರಂಗಭೂಮಿಯಲ್ಲಿ ಮತ್ತಷ್ಟು.ಸೇವೆ ಮಾಡಲಿ ಬಸವಾದಿಶರಣರ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಪಿ.ರಾಜು ಅವರನ್ನು ಅಭಿನಂದಿಸಲಾಯಿತು. ಚುಡಾಧ್ಯಕ್ಷ ಮಹಮ್ಮದ್‌ ಅಸ್ಕರ್ ಮುನ್ನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಸದಸ್ಯ ಡಿ.ಪಿ,ಪ್ರಕಾಶ್,ರಂಗಭೂಮಿ ಕಲಾವಿದ ಸಿದ್ದಪ್ಪ, ಮುಖಂಡರಾದ ಆಲೂರುಮಲ್ಲು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ, ಜಿಲ್ಲಾ ವೀರಶೈವ ಮಹಾಸಭಾದ ಸದಸ್ಯ ಸ್ಟೈಲ್ ಮಂಜು,ಬಸವನಪುರ ರಾಜಶೇಖರ್, ಶಿವಕುಮಾರಸ್ವಾಮಿ, ಎಂ.ಎನ್.ರಮೇಶ್, ಆರ್.ಮೂರ್ತಿ, ಎಂ.ಪಿ.ಮಾದಪ್ಪ, ಗುರುಕಾವುದವಾಡಿ, ಸುಬ್ಬೇಗೌಡ, ನಾಟಕ ವ್ಯವಸ್ಥಾಪಕ ಎಂ.ಎನ್.ಮಹದೇವ, ಕೆ.ಎಂ.ಬಸವರಾಜು, ಮಹದೇವಸ್ವಾಮಿ, ಜಿ.ಎಂ.ಶಂಕರ್,

ಆ‌ರ್.ನಾಗರಾಜು, ಚೇತನ ಕಲಾವಾಹಿನಿ ಸಂಸ್ಥೆ ಅಧ್ಯಕ್ಷ ಜಿ.ರಾಜಪ್ಪ, ಡ್ರಾಮಾ ಮಾಸ್ಟರ್ ಆರ್.ಶಿವಣ್ಣ ಇತರರು ಹಾಜರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net