ನಾಟಕಗಳಿಂದ ಸಮಾಜ, ಮನಸ್ಸು ಪರಿವರ್ತನೆ

klb3
ಕಾಳಗಿಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಂಕರ ಹೂವಿನಹಿಪ್ಪರಗಿ ಅವರನ್ನು ಹವ್ಯಾಸಿ ಕಲಾ ಬಳಗದಿಂದ ಸನ್ಮಾನಿಸಲಾಯಿತು. ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೊಣಗಿ, ವಿಜಯಕುಮಾರ ಚೆಂಗಟಿ, ರಾಮರಾವ ಪಾಟೀಲ್ ಮೋಘಾ, ನಾಗರಾಜ ಚಿನ್ನ ಇತರರಿದ್ದರು.
Published on

ಕಾಳಗಿ: ನಾಟಕದ ಮೂಲಕ ಸಮಾಜದ ಅಂಕು-ಡೊAಕುಗಳನ್ನು ತಿದ್ದಲು ಸಾಧ್ಯ. ಅಲ್ಲದೆ ಮನುಷ್ಯನ ಮನಸ್ಸು, ಸಮಾಜ ಪರಿವರ್ತನೆ ಆಗುತ್ತದೆ ಎಂದು ನಾಟಕಕಾರ ಹಾಗೂ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಹೇಳಿದರು.

ಪ್ರವಾಸಿ ಮಂದಿರದಲ್ಲಿ ತಾಲೂಕು ಹವ್ಯಾಸಿ ಕಲಾ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಂಕರ ಜಿ. ಹೂವಿನಹಿಪ್ಪರಗಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನಾಟಕೋತ್ಸವ, ನಾಟಕ ತಂಡಗಳನ್ನು ಪ್ರೋತ್ಸಾಹಿಸುವುದರ ಜತೆಗೆ ನೈಜ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಸಮಾಜದಲ್ಲಿನ ಸಮಸ್ಯೆಗಳನ್ನು ನಾಟಕಗಳ ಮೂಲಕ ಜಗತ್ತಿಗೆ ಪರಿಚಯಿಸುವಂತ ಕೆಲಸವಾಗಬೇಕು. ಮಾನವ ತನ್ನ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಂಸ್ಕಾರ, ಸಂಸ್ಕೃತಿ ನಾಶವಾಗುತ್ತದೆ. ನಾಟಕಗಳು ಸಂಸ್ಕೃತಿಯ ಭಾಗವಾಗಿದೆ. ಸರಳತೆ, ಆದರ್ಶ, ತತ್ವ, ಜೀವನ ಮೌಲ್ಯಗಳನ್ನು ನಾಟಕಗಳು ಕಲಿಸುತ್ತವೆ ಎಂದು ಹೇಳಿದರು.

ಕವಿ ಶಂಕರ ಜಿ. ಹೂವಿನಹಿಪ್ಪರಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಲಾವಿದರನ್ನು ಹೊರಜಗತ್ತಿಗೆ ಪರಿಚಯಿಸಲು ನಾಟಕಗಳು ಶ್ರೇಷ್ಠ ವೇದಿಕೆಯಾಗಿವೆ. ಕಲೆ ಉಳಿಸುವುದು ಕಲಾವಿದನ ಜವಾಬ್ದಾರಿ, ಕಲೆ ಮತ್ತು ಕಲಾವಿದನನ್ನು ಉಳಿಸಿ- ಬೆಳೆಯಲು ಸಂಘಟಕರು ಅವಶ್ಯ ಎಂದು ಅಭಿಪ್ರಾಯಪಟ್ಟರು.

ಪ್ರಮುಖರಾದ ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೊಣಗಿ, ವಿಜಯಕುಮಾರ ಚೆಂಗಟಿ, ರಾಮರಾವ ಪಾಟೀಲ್ ಮೋಘಾ, ನಾಗರಾಜ ಚಿನ್ನ, ಪ್ರಶಾಂತ ರಾಜಾಪುರ, ಶರಣು ಸಾಲಿಮಠ, ರಾಜಶೇಖರ ಗುಡದಾ, ಶಂಕರ ಚೌಕ, ಅಣ್ಣಾರಾವ ನೂರಂದಗೌಡ, ಬಾಬು ಗೋಪಾಲ, ಲೋಹಿತ ಅಂಕಲಗಿ, ಫಕೀರಯ್ಯ ಸ್ವಾಮಿ ಟೆಂಗಳಿ, ಶ್ರೀಕಾಂತ ಸ್ವಾಮಿ, ಸಂತೋಷ ಕನ್ನಾ, ಸುಂದರ ಸಾಗರ, ಕಾಳಶೆಟ್ಟಿ ಪಡಶೆಟ್ಟಿ, ಶೇಖರ ಮಾನಶೆಟ್ಟಿ, ಬಸವರಾಜ ತಳವಾರ, ಶಿವು ಕೋಡ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net