

ಕವಿತಾಳ: ಸಾಮಾಜಿಕ ನಾಟಕಗಳ ಮೂಲಕ ಕಲಾವಿದರ ಕಲಾ ಪ್ರದರ್ಶನವಾಗಲಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಾಟಕಗಳ ಉದ್ದೇಶವಾಗಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಕಾಚಾಪೂರದಲ್ಲಿ ದೇವಿ ಜಾತ್ರೆ ಅಂಗವಾಗಿ ಮಹರ್ಷಿ ವಾಲ್ಮೀಕಿ ನವತರುಣ ನಾಟ್ಯ ಸಂಘದಿಂದ ಅಭಿನಯಿಸಲಾದ ‘ಬಡವನ ಒಡಲು ಬೆಂಕಿಯ ಸಿಡಿಲು’ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ನಾಟಕದಲ್ಲಿನ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾಟಕಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಆಧುನಿಕತೆ ನೆಪದಲ್ಲಿ ನಾಟಕಗಳು ತೆರೆಮರೆಗೆ ಸರಿಯುತ್ತಿದ್ದು, ಕಲಾವಿದರು ಹಾಗೂ ನಾಟಕಗಳನ್ನು ಪ್ರೋತಾಹಿಸಿ ಬೆಳೆಸಬೇಕು ಎಂದರು.
ಹನುಮಂತ ಪೂಜಾರಿ ಯರಲಗಡ್ಡಿ, ಬಸವಲಿಂಗಮ್ಮ ಅಮ್ಮ ಅಮೀನಗಡ ಸಾನ್ನಿಧ್ಯ ವಹಿಸಿದ್ದರು. ಚಲನಚಿತ್ರ ನಟ ಭೀಮಣ್ಣ ನಾಯಕ, ಪ್ರಮುಖರಾದ ಬಲವಂತರಾಯಗೌಡ ವಟಗಲ್, ಯಂಕೋಬ ನಾಯಕ, ಸುಭಾಸ್ ಅಮೀನಗಡ, ಆದನಗೌಡ, ಶರಬಣ್ಣ ಮೇಟಿ, ಯಮನೂರು ಯತಗಲ್, ಮಲ್ಲು ನೆಲಕೊಳ, ಶಿವರಾಜ ಪೂಜಾರಿ, ಉಪಸ್ಥಿತರಿದ್ದರು.