ನಾಟಕಗಳ ಉತ್ತಮ ಅಂಶ ಪಾಲಿಸಲಿ

2
ದೇಶನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನಕ್ಕೆ ಜಾತ್ರಾ ಕಮಿಟಿ ಅಧ್ಯ ದೀಪಕಗೌಡ ಪಾಟೀಲ ಚಾಲನೆ ನೀಡಿದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಾದರ್​ ಮಿನಿನೋ ಗೋನ್ವಾಲಿಸ್​, ಶ್ರೀಶೆಲ ಕಮತಗಿ, ಸುರೇಖಾ ಕೇದಾರಿ ಇದ್ದರು.
Published on

ನೇಸರಗಿ: ನಾಟಕಗಳಲ್ಲಿರುವ ಉತ್ತಮ ಅಂಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮದೇವಿ ಜಾತ್ರಾ ಕಮಿಟಿ ಅಧ್ಯ ದೀಪಕಗೌಡ ಪಾಟೀಲ ಹೇಳಿದರು.

ಸಮೀಪದ ದೇಶನೂರ ಗ್ರಾಮದ ಗ್ರಾಮದೇವಿ, ಬಾವಿ ಬಸವೇಶ್ವರ ಹಾಗೂ ಹನುಮಂತ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬನಶಂಕರಿದೇವಿ ನಾಟ್ಯ ಸಂದಿಂದ ಹಮ್ಮಿಕೊಂಡಿದ್ದ ಬಾಳು ಬೆಳಗಿದ ಮನೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ನಾಟಕಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾನೀಯ. ಯುವಕರು ಅಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರುವುದರ ಜತೆಗೆ ಸಂಸ್ಕಾರವಂತರಾಗಬೇಕು ಎಂದರು.

ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಾದರ್​ ಮಿನಿನೋ ಗೋನ್ವಾಲಿಸ್​, ಪ್ರವಿಣ ಪಾಶ್ಚಾಪೂರ, ಶ್ರೀಶೆಲ ಕಮತಗಿ, ಮಲ್ಲಿಕಾರ್ಜುನ ಕೊತ್ತಲ, ಬಸವರಾಜ ಕೇದಾರಿ, ಗ್ರಾಪಂ ಅಧ್ಯೆ ಸುರೇಖಾ ಕೇದಾರಿ, ಸದಾನಂದ ಭಜಂತ್ರಿ, ಪ್ರಶಾಂತ ಚಡಿಚ್ಯಾಳ, ಸುರೇಶ ರಂಕಾಳಿ, ಬಸವಂತ ಚಡಿಚ್ಯಾಳ, ಸಂತೋಷ ತಿಳಗಂಜಿ, ಅಡಿವೆಪ್ಪ ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net