ನಾಟಕ ಪ್ರದರ್ಶನ 25ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಸಂತತ ಟ್ರಸ್ಟ್​ ಸಹಯೋಗದಲ್ಲಿ ಜ. 25ರಂದು ಸಂಜೆ 6.45ಕ್ಕೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಟೂರಿಂಗ್​ ಟಾಕೀಸ್ ​ಅಭಿನಯಿಸುವ ಉತ್ತರ ಕರ್ನಾಟಕ ಭಾಷೆಯ ಕೌಟುಂಬಿಕ ನಗೆ ನಾಟಕ "ಹುಚ್ಚರ ಸಂತೆ' ಪ್ರದರ್ಶನಗೊಳ್ಳಲಿದೆ.

ಕಿರುತೆರೆ ನಟ ಉಮೇಶ ತೇಲಿ ನಿರ್ದೇಶಿಸಿ, ನಟಿಸುವ ಈ ನಾಟಕ 200ನೇ ಪ್ರದರ್ಶನ ಇದಾಗಿದ್ದು, ಉತ್ತರ ಕರ್ನಾಟಕ ಭಾಷೆಯ ದೇಸಿ ಸೊಗಡಿನ ಹಾಸ್ಯ ನಾಟಕವಾಗಿದೆ. ನಾಟಕದಲ್ಲಿ ಸಿದ್ಧಾರ್ಥ, ಉಮೇಶ ತೇಲಿ, ಪ್ರೇಮ್​ ನಿರಗಟ್ಟಿ, ಪ್ರಶಾಂತ, ಸುಕನ್ಯಾ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net