ನಾಟಕ, ನೃತ್ಯಗಳ ಮೂಲಕ ಪರಿಸರದ ಬಗ್ಗೆ ಜಾಗೃತಿ

9 gkp 05
Published on


ಗೋಣಿಕೊಪ್ಪ: ಬ್ರಹ್ಮಗಿರಿ ಸಹೋದಯ ಸಂಸ್ಥೆ ವತಿಯಿಂದ ಅರಮೇರಿ ಎಸ್‌ಎಂಎಸ್ ವಿದ್ಯಾಪೀಠದಲ್ಲಿ ಬುಧವಾರ ಅಂತಾರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ಜಿಲ್ಲೆಯ ಸಿಬಿಎಸ್‌ಇ ಶಾಲೆಗಳ 6-8ನೇ ತರಗತಿ ವಿದ್ಯಾರ್ಥಿಗಳಿಗೆ ಜಾಗತಿಕ ಯೋಗ ಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನದ ಬಗ್ಗೆ ಪ್ರದರ್ಶನ ಸಂಗೀತ, ನಾಟಕ, ನೃತ್ಯದ ಮೂಲಕ ಸಂದೇಶ ಸಾರಿದರು. ನೀರು, ಮಣ್ಣು, ಶಾಖ, ಗಾಳಿ, ಸಸ್ಯವರ್ಗ, ಪ್ರಾಣಿ ವರ್ಗ ವಿಷಯದಲ್ಲಿ ಭೂಮಂಡಲ ರಕ್ಷಣೆಗೆ ಯುವ ಪೀಳಿಗೆಯ ಪಾತ್ರದ ಕುರಿತು ಜಾಗೃತಿ ಮೂಡಿಸಲಾಯಿತು.


ಎಸ್‌ಎಂಎಸ್ ವಿದ್ಯಾಸಂಸ್ಥೆಯ ಪಾಂಚಜನ್ಯ ಬ್ಯಾಂಡ್ ಪಡೆ, ವಿಲೋಚನಾ ನೃತ್ಯ ತಂಡದಿಂದ ಪ್ರದರ್ಶನ ನೀಡಲಾಯಿತು. ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ಮಾತನಾಡಿ, ವೈಜ್ಞಾನಿಕ ಮನೋಭಾವ ಅವಶ್ಯ ಎಂದರು. ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಧ್ಯಾತ್ಮ ಮತ್ತು ವಿಜ್ಞಾನದ ಸಂಬಂಧವನ್ನು ತಿಳಿಸಿಕೊಟ್ಟರು.


ಬ್ರಹ್ಮಗಿರಿ ಸಹೋದಯ ಸಂಸ್ಥೆ ಅಧ್ಯಕ್ಷೆ ಕೆ. ಎಸ್. ಸುಮಿತ್ರಾ, ನ್ಯಾಷನಲ್ ಅಕಾಡೆಮಿ ಪ್ರಾಂಶುಪಾಲ ಜೆ. ಎನ್ ಪುಷ್ಪ, ಅಂಕುರ್ ಪಬ್ಲಿಕ್ ಶಾಲೆ ವ್ಯವಸ್ಥಾಪಕ ರತ್ನ ಚರ್ಮಣ, ಎಸ್‌ಎಂಎಸ್ ಪ್ರಾಂಶುಪಾಲ ಕುಸುಮ್ ಟಿಟೋ, ಎಎಲ್‌ಜಿ ಪ್ರಾಂಶುಪಾಲ ಜಾಯ್ಸಿ ವಿನಯ, ಶಿಕ್ಷಕಿ ಪಿ.ಎ. ಪ್ರತಿಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net