

ಹೊಳೆನರಸೀಪುರ: ಬೆಂಗಳೂರು ನಗರವನ್ನು ಸ್ಥಾಪಿಸಿ ವಿಶ್ವ ಖ್ಯಾತಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡ ಅವರ ನೆನಪಿಗಾಗಿ ತಾಲೂಕಿನ ನಾಗಲಾಪುರ ಗ್ರಾಮದ ವೃತ್ತದಲ್ಲಿ ಕೇಂಪೇಗೌಡ ಅವರ ವೃತ್ತವನ್ನು ಸ್ಥಾಪಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಹೇಳಿದರು.
ತಾಲೂಕಿನ ನಾಗಲಾಪುರದಲ್ಲಿ ನಾಡಪ್ರಭು ಕೇಂಪೇಗೌಡ ವೃತ್ತ ಹಾಗೂ ನಾಮಫಲಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಾಣ ಮಾಡಿ ಎಲ್ಲ ಜಾತಿ, ಧರ್ಮದವರು ಮೆಚ್ಚುವಂತೆ ಉಪ ನಗರಗಳನ್ನು ಸ್ಥಾಪಿಸಿ ವಿಶ್ವದ ಮೆಚ್ಚುಗೆ ಪಡೆದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ ಅವರು, ಕೇಂಪೇಗೌಡ ಅವರ ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವದ ಲ್ಲೇ ಎತ್ತರಕ್ಕೆ ಬೆಳೆದಿದೆ ಎಂದರು.
ಸಂತಶ್ರೇಷ್ಠ ಕನಕದಾಸರು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ ಅವರು ಒಂದೇ ಜಾತಿಗೆ ಮೀಸಲಾದವರಲ್ಲ. ಇವರ ಆದರ್ಶಗಳು ಸಮಾಜದಲ್ಲಿನ ಎಲ್ಲರಿಗೂ ದಾರಿ ದೀಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಮಾಯಣ್ಣ, ಲೋಕೇಶ್, ಯೋಗಣ್ಣ, ಮಹೇಶ್, ನಾರಾಯಣ್ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.