ಚಿಕ್ಕ ಉದ್ಬಾಳ ಹಳ್ಳಕ್ಕಿಲ್ಲ ಸೇತುವೆ

12 MASKI 01
ಮಸ್ಕಿ ತಾಲ್ಲೂಕಿನ ಚಿಕ್ಕ ಉದ್ಬಾಳ ಗ್ರಾಮದ ಹಳ್ಳ ದಾಟುವಾಗ ಟ್ರ್ಯಾಕ್ಟರ್‌ನ ಮುಂಭಾಗದ ಗಾಲಿಗಳು ಮೇಲೆದ್ದಿರುವುದು.
Published on

ಮಸ್ಕಿ: ತಾಲೂಕಿನ ಬಳಗಾನೂರು ಸಮೀಪದ ಚಿಕ್ಕ ಉದ್ಬಾಳ ಗ್ರಾಮದ ಹಳ್ಳಕ್ಕೆ ಸೇತುವೆ ಇಲ್ಲದಿದ್ದರಿಂದ ನಾಗರಿಕರು ಹಳ್ಳ ದಾಟಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟುವಂತಾಗಿದೆ.

ಚಿಕ್ಕ ಉದ್ಬಾಳ ಗ್ರಾಮದಲ್ಲಿ ಬಸವಣ್ಣ ದೇವರ ಗುಡಿ ಇದೆ. ಸೋಮವಾರ ಮತ್ತು ಮಂಗಳವಾರ ಸುರಿದ ಮಳೆಗೆ ಹಳ್ಳ ತುಂಬಿ ಬಂದಿದೆ. ದೇವರ ದರ್ಶನಕ್ಕೆ ಭಕ್ತರು ಮಂಗಳವಾರ ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ್ದಾರೆ. ಹಳ್ಳ ದಾಟುವಾಗ ಟ್ರ್ಯಾಕ್ಟರ್ ಹರಸಾಹಸ ಪಟ್ಟು ಏರಿ ಎರುವಾಗ ಮುಂಭಾಗದ ಗಾಲಿಗಳು ಮೇಲೆದ್ದು ಪಲ್ಟಿಯಾಗುವ ಅಪಾಯ ಎದುರಾಗಿತ್ತು.

ಚಾಲಕ ವಿವೇಚನೆ ಬಳಸಿ ಹಳ್ಳ ದಾಟಿಸಿದ್ದಾನೆ. ಟ್ರ್ಯಾಕ್ಟರ್‌ನಲ್ಲಿ 15ಕ್ಕೂ ಹೆಚ್ಚು ಜನ ಮಹಿಳೆಯರಿದ್ದು ಟ್ರ್ಯಾಕ್ಟರ್‌ನಲ್ಲಿದ್ದ ಹತ್ತು ವರ್ಷದ ಬಾಲಕ ಬಿದ್ದಿದ್ದರಿಂದ ಕೈಬೆರಳು ಕತ್ತರಿಸಿಕೊಂಡಿದ್ದಾನೆ. ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net