ನಾಗರಕಟ್ಟೆ ಕಾರ್ತಿಕೋತ್ಸವ ಅದ್ದೂರಿ

Karthikothsava
Published on

ಚಿತ್ರದುರ್ಗ: ಬುರುಜನಹಟ್ಟಿ ಉಪ್ಪು ನೀರು ಬಾವಿ ರಸ್ತೆಯ ಅರಳಿ ಮರದ ನಾಗರಕಟ್ಟೆಯ ಕಾರ್ತಿಕೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ಇಡೀ ಆವರಣ ತಳಿರು-ತೋರಣ, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ನಾಗದೇವರ ಕಲ್ಲುಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಬಿಡಿಸಿದ್ದ ವರ್ಣಮಯ ರಂಗೋಲಿಗಳು ಗಮನ ಸೆಳೆದವು.

ಮಂತ್ರ ಘೋಷಗಳೊಂದಿಗೆ ಅರ್ಚಕ ಕೃಷ್ಣಪ್ಪ ಪೂಜೆ ನೆರವೇರಿಸಿದರು. ನೆರೆದಿದ್ದ ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸ್ಥಳೀಯ ಕಲಾವಿದರಿಂದ ಕರೋಕೆ ಗಾಯನ ಕಾರ್ಯಕ್ರಮ ನಡೆಯಿತು.

ಕೆ.ಆರ್.ಕೃಷ್ಣಮೂರ್ತಿ, ರಾಜಣ್ಣ, ಟಿ.ಹನುಮಂತಪ್ಪ, ಶೇಖರ್, ಬಸಣ್ಣ, ನಿಂಗಪ್ಪ, ಬಸವರಾಜ್, ರಾಜಪ್ಪ, ಎಸ್.ಬಿ.ಗಣೇಶ್, ಬಾಗೋಡಪ್ಪ, ಕಮಲಮ್ಮ, ನಿರ್ಮಲಾ, ಲಲಿತಮ್ಮ, ತೊಳಸಮ್ಮ, ಸುಜಾತಾ, ಗೌರಮ್ಮ, ತಿಪ್ಪಮ್ಮ, ಸಿದ್ದಗಂಗಮ್ಮ, ಸುವರ್ಣ, ವೀಣಾ, ನಂದಿನಿ, ಗಿರಿಜಾ, ತಿಮ್ಮಕ್ಕ, ಮಮತಾ, ಜಯಲಕ್ಷ್ಮಿ, ಅನಸೂಯ, ಆದಿಲಕ್ಷ್ಮ್ಮಿ, ರೇಖಾ, ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net