ನಾಗರ ಕಟ್ಟೆಗೆ ಸಾಮೂಹಿಕ ಪೂಜೆ

29sdp3a
Published on

ಸಿದ್ದಾಪುರ: ತಾಲೂಕಿನಾದ್ಯಂತ ನಾಗರ ಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಯಿತು. ನಾಗರ ಪಂಚಮಿ ಹಬ್ಬವನ್ನು ಹಲವೆಡೆ ಮಳೆಯ ನಡುವೆಯೇ ಆಚರಿಸಿದರು.

ಗ್ರಾಮೀಣ ಭಾಗದಲ್ಲಿ ಹಲವು ಊರುಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಊರಿನ ನಾಗರ ಕಟ್ಟೆಯಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ಹೆಗ್ಗೋಡಮನೆಯ ನಾಗಕಟ್ಟೆಯಲ್ಲಿ, ಹಾರ್ಸಿಕಟ್ಟಾ ಅಶ್ವತ್ಥ ನಾಗರಕಟ್ಟೆಯಲ್ಲಿ, ಸಿದ್ದಾಪುರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ಹಾಳದಕಟ್ಟಾದ ನಾಗರಕಟ್ಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಭಕ್ತರು ವಿಶೇಷವಾಗಿ ನಾಗದೇವತೆಯನ್ನು ಅಲಂಕರಿಸಿ ಪೂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net