ನಾಗಮ್ಮಜ್ಜಿಯ ಸುವರ್ಣ ಮಹೋತ್ಸವ ಪ್ರಶಸ್ತಿ

30 MANJU 10
Published on

ಹೊಸಪೇಟೆ: ರಾಜ್ಯ ಸರ್ಕಾರ ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಕಾರಿಗನೂರಿನ ನಾಗಮ್ಮಜ್ಜಿ ಕೃಷಿ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ.

ಓದಿಲ ಬರವಣಿಗೆಯಿಲ್ಲ. ದೇವಾದಾಸಿಯಾಗಿ ಜೀವನ ಸಾಗಿಸಿದ ಕಾರಿಗನೂರಿನ ನಾಗಮ್ಮಜ್ಜಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಯನ್ನು ರಾಜ್ಯ ಸರ್ಕಾರ ಗುರಿತಿಸಿದ್ದಾರೆ.

ನಾಗಮ್ಮ ಅಜ್ಜಿ ನಾಯಕ ಸಮುದಾಯದ ದೇವದಾಸಿ ಮಹಿಳೆ. ಇವರಿಗೆ ಕೃಷಿಯೇ ಇವರ ಜೀವಾಳ. ಬಾಲ್ಯದಿಂದಲೇ ಕೃಷಿಯಲ್ಲಿ ನಿರತರು ಇವರು ಇಂಗಳಗಿ ಗ್ರಾಮದಲ್ಲಿ 8 ಎಕರೆ ಸರಕಾರಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅದನ್ನು ಮರಳಿ ಪಡೆದಾಗ ಆಕಾಶವೇ ಕಳಚಿದಂಗೆ ಆಗಿತ್ತು. ಬದುಕಲು ಮತ್ತೆ ಮತ್ತೊಂದು ಕಡೆ ಎರಡುವರೆ ಎಕರೆಯಲ್ಲಿ ಕೃಷಿ ಕೆಲಸ ಪ್ರಾರಂಭ ಮಾಡಿಯೇ ಬಿಟ್ಟರು. ಆದರೆ ರಾಸಾಯನಿಕ ಕೃಷಿಯ ಒತ್ತಡದಿಂದ ಆರ್ಥಿಕ ತೊಂದರೆಯಿAದ ಭೂಮಿಯನ್ನು ಬೀಳು ಬಿಟ್ಟಿದ್ದರು. ಸಖಿ ಸಂಸ್ಥೆಯ ಸಹಾಯದಿಂದ ಬೀಳು ಭೂಮಿಯನ್ನು ಕೃಷಿಭೂಮಿಯನ್ನಾಗಿ ಪರಿವರ್ತಿಸಿ ಸಹಜ-ಸಾವಯವ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡಿದ್ದಾರೆ.

ಬಿಸಿಲಿರಲಿ, ಚಳಿಯಿರಲಿ ಏನೆ ಸಂಕಷ್ಟ ಇರಲಿ ಸದಾ ತಮ್ಮ ಭೂಮಿಯ ಜತೆ ಇರಲೇಬೇಕು ಎನ್ನುವ ಹಂಬಲ ಇವರದ್ದು. ಮನೆಯಿಂದ ಕೃಷಿಭೂಮಿ ಎರಡು ಕಿ.ಮೀ ಇದೇ, ನಡದೇ ಹೋಗಿ, ಕೆಲಸ ಮಾಡುತ್ತಾಳೆ. ಭೂಮಿಯ ಜತೆ ನಂಟು ಅಷ್ಟಿಷ್ಟಲ್ಲ. ಯುವಜನರಿಗೆ ಕೃಷಿಯ ಪಾಠವನ್ನು ಹೇಳಿಕೊಡುತ್ತಾರೆ. ಭೂಮಿಯಲ್ಲಿ ಜೋಳ, ನವಣೆ, ಬರಗು ಮತ್ತು ಇತರೆ ಸಿರಿಧಾನ್ಯಗಳ ಜತೆ ಒಂದಿಷ್ಟು ತರಕಾರಿಗಳನು, ಬೆಳೆಯುತಿದ್ದಾರೆ. ಈ ಕೃಷಿ ಸಾಧನೆಗೆ ರಾಜ್ಯ ಸರ್ಕಾರ ಗುರುತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net