ನಾಗಮಾರ್ಷಲ್ ಆರ್ಟ್ಸ್ ಕರಾಟೆಪಟುಗಳ ಸಾಧನೆ

IMG-20241112-WA0005
Published on

ಚಾಮರಾಜನಗರ: ಇತ್ತೀಚಿಗೆ  ಮೈಸೂರಿನಲ್ಲಿ  ವಿ.ಎನ್.ಯೋಧ ಮಾರ್ಷಲ್‌ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆದ 4ನೇ  ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಚಾಮರಾಜನಗರ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳು ಭಾಗವಹಿಸಿ ವಿಜೇತರಾಗಿ  ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಟ ಮತ್ತು ಕುಮಿತೆ ವಿಭಾಗದಲ್ಲಿ  ಉತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ, ಪ್ರಮಾಣಪತ್ರ  ಪಡೆದಿದ್ದಾರೆ. ಕಟ ವಿಭಾಗದಲ್ಲಿ ಮಹಮದ್ ಫಾವಜ್, ಚಿರಂತ್, ರೀಹಾನ್, ಅರ್ಮಾನ್, ಅವಾಜ್ ಕಾಮಕ್ ಪ್ರಥಮ ಸ್ಥಾನ ,ನವಾಜ್ ದ್ವಿತೀಯ ಸ್ಥಾನ, ಎಂ.ಆರ್.ಭರತ್ ಕುಮಾರ್, ರಜಕ್,ಉಮೇಅಮ್ರಾ, ಹಮ್ ಜ್ಹಾ,ಅಪ್ಪನ್,ಅಸನ್ ಫಾರ್ಹದ್, ಮಹಮ್ಮದ್ ತೃತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ಅಭಿನಂದನೆ: ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ  ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ  ಸೆನ್ಸಾಯ್ ಯೋಗೀಶ್, ಸೆಂಪಾಯ್ ಅಬ್ದುಲ್ ಫೈಸಲ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net