ನಾಗಮಂಗಲ ಘಟನೆ ಸಿಬಿಐಗೆ ವಹಿಸಿ

ydg05
Published on

ಯಾದಗಿರಿ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ದಾಳಿ ಖಂಡಿಸಿ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಹಿಂದು ಸಾಮ್ರಾಟ್ ಜೈ ಛತ್ರಪತಿ ಶಿವಾಜಿ ಮಹಾರಾಜ ಸೇನೆ ಅಧ್ಯಕ್ಷ ಪರಶುರಾಮ ಶೇಗುರಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉz್ದೆÃಶಿಸಿ ಮಾತನಾಡಿದ ಅವರು, ಉz್ದÉÃಶಪೂರ್ವಕವಾಗಿಯೇ ಈ ಕೃತ್ಯ ಎಸಗಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ದಾಳಿಕೊರರು, ಪೆಟ್ರೊಲ್‌ಬಾಂಬ್, ಕಲ್ಲುಗಳು, ತಲವಾರ್, ಚಾಕು, ಚೂರಿಗಳಿಂದ ದಾಳಿ ನಡೆಸಿದ್ದಾರೆ.

ಈ ಘಟನೆಯಲ್ಲಿ ಬರಿ ಹಿಂದುಗಳೇ ಸಂತ್ರಸ್ತರಾಗಿ ಕಷ್ಟ, ನಷ್ಟ ಅನುಭವಿಸಿದರು. ಹಿಂದುಗಳ ೨೩ಕ್ಕೂ ಹೆಚ್ಚು ಅಂಗಡಿಗಳು ಬೆಂಕಿ ಹಚ್ಚಲಾಗಿದೆ. ಮನೆಯ ಮುಂದಿನ ವಾಹನಗಳನ್ನು ದರೋಡೆ ಮಾಡಲಾಗಿದೆ. ಆದರೆ ಗಲಾಟೆ ಮಾಡಿದವರನ್ನು ಬಿಟ್ಟು ಗಣೇಶ ವಿಗ್ರಹ ಪ್ರತಿಪ್ಠಾಪಿಸಿದವರನ್ನೇ ಆರೋಪಿಗಳು ಎಂದು ಬಿಂಬಿಸಿದ್ದಾ ಎಂದು ಅವರು ದೂರಿದರು.

ಈ ಘಟನೆ ಸಿಬಿಐಗೆ ವಹಿಸಬೇಕು. ಮಸೀದಿಗಳ ಮೇಲೆ ಹಾಕಿರುವ ಧ್ವನಿವರ್ಧಕಗಳನ್ನು ಸುಪ್ರಿಂಕೋರ್ಟ್ನ ಆದೇಶದ್ವನಯ ತಕ್ಷಣ ತೆರವುಗೊಳಿಸಬೇಕು. ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಪ್ರಮುಖರಾದ ನಿಂಗಪ್ಪ ಚಡಬೋ, ಖತಲಪ್ಪ ನಾಯ್ಕೋಡಿ, ಆಂನದ ಯಂಪಾಡ್, ಹಣಮಂತ ಬಂಡಳ್ಳಿ, ಯಲ್ಲಾಲಿಂಗ್ ಚಾಮನಳ್ಳಿ, ಶರಣು ಯರಗೋಳ್, ಸಚಿನ್ ಸೈದಾಪುರ, ಸಾಬಣ್ಣ ಬಂದಳ್ಳಿ, ಸಿದ್ದು ಚಿಂತನಳ್ಳಿ, ವೆಂಕಟೇಶ ತಳವಾರ, ಮಂಜು ಸೈದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net