ನಾಗಬನದಲ್ಲಿ ಪೂಜೆ ಸಲ್ಲಿಕೆ

29SPT4
Published on

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶ್ರದ್ಧಾ ಭಕ್ತಿಯಿಂದ ಸುಬ್ರಹ್ಮಣ್ಯ ಷಷ್ಠಿಯನ್ನು ಮಂಗಳವಾರ ಆಚರಿಸಲಾಯಿತು.


ಜನರು ನಾಗರ ಕಲ್ಲು ಮತ್ತು ಹುತ್ತಗಳಿಗೆ ಕುಟುಂಬಸ್ಥರೊಂದಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಇಲ್ಲಿನ ಸೋಮೇಶ್ವರ ದೇವಾಲಯದ ನಾಗಬನದಲ್ಲಿ ಮಹಿಳೆಯರು, ಪುರುಷರು ಪೂಜೆ ಸಲ್ಲಿಸಿದರು. ಆನೆಕೆರೆ ಬಳಿಯಲ್ಲಿರುವ ನಾಗರ ಕಲ್ಲಿಗೆ ಪೂಜೆಯ ನಂತರ ಹಾಲೆರೆದರು. ಪಟ್ಟಣದ ಅಯ್ಯಪ್ಪ ದೇವಸ್ಥಾನದಲ್ಲಿರುವ ನಾಗಬನದಲ್ಲಿಯೂ ವಿಶೇಷ ಪೂಜೆಗಳು ನಡೆದವು.


ಹಿರಿಕರ ಗ್ರಾಮದ ಮಲ್ಲೇಶ್ವರ ದೇವಾಲಯದ ಅರಳಿ ಮರದ ನಾಗದೇವ ಬನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಬಾಲುಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net