ನಾಗನೂರ ಪಟ್ಟಣ ಪಂಚಾಯಿತಿ ಚುನಾವಣೆಗೆ ಆಯ್ಕೆ

1
Published on

ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣ ಪಂಚಾಯಿತಿಗೆ ಸೋಮವಾರ ಜರುಗಿದ ಅಧ್ಯ&ಉಪಾಧ್ಯರ ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯೆಯಾಗಿ ಚಂದ್ರವ್ವ ಯರಗಣವಿ ಮತ್ತು ಉಪಾಧ್ಯರಾಗಿ ಸುಭಾಸ ಕಾತ್ತೇನವರ ಆಯ್ಕೆಯಾಗಿದ್ದಾರೆ.

ಅಧ್ಯ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯ ಸ್ಥಾನವು ಎಸ್ಸಿ ಪುರುಷರಿಗೆ ಮೀಸಲಾಗಿತ್ತು. ಅಧ್ಯ ಸ್ಥಾನಕ್ಕೆ ಚಂದ್ರವ್ವ ಯರಗಣವಿ, ಬಸಪ್ಪ ತಡಸನ್ನವರ, ಪವಾಡಿ ಗೋಟೂರ ನಾಮಪತ್ರ ಸಲ್ಲಿಸಿದ್ದರು. ಆದರೆ ಪವಾಡಿ ಗೋಟೂರ ನಾಮಪತ್ರ ವಾಪಸ್​ ಪಡೆದರು. ಚುನಾವಣೆಯಲ್ಲಿ ಇಬ್ಬರು ತಲಾ ಎಂಟು ಮತ ಪಡೆದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಚಂದ್ರವ್ವ ಯರಗಣವಿ ಅಧ್ಯೆಯಾಗಿ ಆಯ್ಕೆಯಾದರು. ಉಪಾಧ್ಯ ಸ್ಥಾನಕ್ಕೆ ಸುಭಾಸ ಕಾತ್ತೆನವರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಬೆಂಬಲಿಗರು ಗುಲಾಲ ಎರಚಿ ವಿಜಯೋತ್ಸವ ಆಚರಿಸಿದರು.

ಚುನಾವಣಾಧಿಕಾರಿಯಾಗಿ ಶಿವಾನಂದ ಬಬಲಿ, ಸಹಾಯಕರಾಗಿ ಬಾಲನಾಯ್ಕ ಕುಮರೇಶ ಕಾರ್ಯನಿರ್ವಹಿಸಿದರು. ಮುಖಂಡ ಬಸನಗೌಡ ಪಾಟೀಲ, ಪಪಂ ಸದಸ್ಯರಾದ ಬಸವರಾಜ ಹಳೆಗೌಡ್ರ, ಲಕ್ಷ$್ಮಣ ದಿನ್ನಿಮನಿ, ಜಯಶ್ರೀ ಮನ್ನಿಕೇರಿ, ಶಂಕರ ದಳವಾಯಿ, ಶೋಭಾ ಬಬಲಿ, ಲಕ್ಕವ್ವ ಮುತ್ತೇನ್ನವರ, ಮುಖಂಡರಾದ ಕೆಂಚಗೌಡ ಪಾಟೀಲ, ಪರಸಪ್ಪ ಬಬಲಿ, ಶಂಕರ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net