ನಾಗನಾಥ ಬಿರಾದಾರಗೆ ಪಿಎಚ್.ಡಿ

Nagnath Biradar
Published on

ಬೀದರ್: ಭಾಲ್ಕಿ ತಾಲ್ಲೂಕಿನ ಬೀರಿ(ಬಿ) ಗ್ರಾಮದ ನಾಗನಾಥ ಜಗನ್ನಾಥ ಬಿರಾದಾರ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ.
ಬೀದರ್‍ನ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಡಾ. ಕಿಶನ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ‘ಪರ್ಫಾರ್ಮೆನ್ಸ್ ಮಾಡೆಲಿಂಗ್ ಆಫ್ ಮೈಕ್ರೊ ಸ್ಟ್ರಿಪ್ ಅಂಟೆನ್ನಸ್ ಫಾರ್ ವೈರ್‍ಲೆಸ್ ಕಮ್ಯುನಿಕೇಷನ್ ಅಪ್ಲಿಕೇಷನ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ. ಬಿರಾದಾರ ಅವರಿಗೆ ಪಿ.ಎಚ್.ಡಿ. ಪದವಿ ದೊರಕಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net