

ಕೊಪ್ಪ: ಸುಬ್ರಹ್ಮಣ್ಯ ಷಷ್ಠಿ ಹಿನ್ನೆೆಲೆಯಲ್ಲಿ ತಾಲೂಕಿನ ನಾಗದೇವತಾ ಸನ್ನಿಧಿಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆಯಿಂದ ದೀಪೋತ್ಸವ ನಡೆಸಲಾಯಿತು. ಪಟ್ಟಣದ ಅರಳಿಕಟ್ಟೆ ಶಕ್ತಿಗಣಪತಿ ಹಾಗೂ ನಾಗದೇವತಾ ಸನ್ನಿಧಿಯಲ್ಲಿ ಅದ್ದೂರಿಯಾಗಿ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು. ಬೆಳಗ್ಗೆಯಿಂದಲೇ ನಾಗದೇವರಿಗೆ ಪೂಜೆ ನೆರವೇರಿಸಲಾಯಿತು. ಸಂಜೆ ಪಟ್ಟಣದ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷದಿಪ ಹಚ್ಚಲಾಯಿತು. ಬಾಳಗಡಿಯ ನಾಗದೇವರಿಗೆ ಪವಮಾನಾಭಿಷೇಕ, ರಾತ್ರಿ ಪಂಚಾಮೃತ ಅಭಿಷೇಕ ನಡೆಯಿತು.