ನಾಗ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ

Naga Chowdeshwari Devi
Published on

ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯ ರಾಮತೀರ್ಥ ಆಶ್ರಮ ಪಕ್ಕದಲ್ಲಿನ ನಾಗ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವದ ಅಂಗವಾಗಿ ದೇವಿಗೆ ಅಭಿಷೇಕ, ಅಲಂಕಾರ ಸೇವೆ, ದುರ್ಗಾ ಹೋಮದ ಪೂರ್ಣಾಹುತಿಯೊಂದಿಗೆ ವಿಶೇಷ ಪೂಜೆಗಳು ಜರುಗಿದವು.

ದೀಪಾರಾಧನೆ, ಅನ್ನದಾಸೋಹದಲ್ಲಿ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು ಎಂದು ಮರುಳಪ್ಪ, ಮರುಳಸಿದ್ದೇಶ್ವರ ಬಡಾವಣೆ ಹಾಗೂ ಮೆದೇಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net