ನಾಗ ಚೌಡೇಶ್ವರಿ ಕಾರ್ತಿಕ ಇಂದು

Naga Chowdeshwari Devi
Published on

ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯ ರಾಮತೀರ್ಥ ಆಶ್ರಮ ಪಕ್ಕದಲ್ಲಿನ ನಾಗ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವ 8ರಂದು ಬೆಳಗ್ಗೆ 9ಕ್ಕೆ ಅಭಿಷೇಕ, ಅಲಂಕಾರ ಸೇವೆ, ದುರ್ಗಾ ಹೋಮ ಸೇರಿ ವಿಶೇಷ ಪೂಜೆಯೊಂದಿಗೆ ಆಚರಿಸಲಾಗುತ್ತಿದೆ.

ಮಧ್ಯಾಹ್ನ 12.30ಕ್ಕೆ ಹೋಮದ ಪೂರ್ಣಾಹುತಿ ನಡೆಯಲಿದ್ದು, ಮಹಾಮಂಗಳಾರತಿ ನಂತರ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ದೀಪಾರಾಧನೆ ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮರುಳಪ್ಪ, ಮರುಳಸಿದ್ದೇಶ್ವರ ಬಡಾವಣೆ ಹಾಗೂ ಮೆದೇಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net