ನಾಂದನಿಮಠಕ್ಕೆ ಮಹಾಂತೇಶ ಕವಟಗಿಮಠ ಭೇಟಿ

IMG-20250809-WA0032
Published on

ನಾಂದನಿಮಠಕ್ಕೆ ಮಹಾಂತೇಶ ಕವಟಗಿಮಠ ಭೇಟಿ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಮಹಾರಾಷ್ಟ್ರದ ನಾಂದನಿ ಮಠದ ಮಾಧುರಿ(ಮಹಾದೇವಿ)ಆನೆಯು ಧಾರ್ಮಿಕ ಮತ್ತು ಭಾವನಾತ್ಮಕವಾಗಿ ಜನತೆಯೊಂದಿಗೆ ಬೆರೆತಿದ್ದು, ಆನೆ ಮರಳಿ ಮಠಕ್ಕೆ ತರುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರದ ಮೂಲಕ ಸುಪ್ರೀಂ ಕೋರ್ಟನಲ್ಲಿ ಪ್ರಯತ್ನಿಸಲಾಗುವುದು ಎಂದು ಮಾಜಿ ವಿ.ಪ ಸದಸ್ಯ ಹಾಗೂ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಹೇಳಿದರು.

ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನಾಂದನಿ ಗ್ರಾಮದ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಆನೆ ಸ್ಥಳಾಂತರಿಸಿರುವ ಕುರಿತು ಅವರು ಶ್ರೀಗಳೊಂದಿಗೆ ಚರ್ಚಿಸಿದರು.

ಈ ವೇಳೆ ಮಾತನಾಡಿದ ಅವರು ಐತಿಹಾಸಿಕ ಹಿನ್ನೆಲೆವುಳ್ಳ ಅತ್ಯಂತ ಪ್ರಾಚೀನ ಜೈನ ಮಠ ಇದಾಗಿದ್ದು, ಇಲಿನ ಪೂಜ್ಯರು ಮತ್ತು ತ್ರಿ ಮಠವು ಹಲವಾರು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ. ಶ್ರೀಮಠದಲ್ಲಿರುವ ಮಾಧುರಿ ಆನೆಯು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಪಂಚಕಲ್ಯಾಣ ಪೂಜೆಗಳಲ್ಲಿ ಭಾಗವಹಿಸುವುರ ಮೂಲಕ ಉಭಯ ರಾಜ್ಯಗಳಲ್ಲಿ ಚಿರಪರಿಚಿತವಾಗಿ ಭಾವನಾತ್ಮಕವಾಗಿ ಶ್ರೀಮಠ ಮತ್ತು ಜನತೆಯೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದೆ. ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದಂತೆ ವನತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿರುವ ಆನೆ ಮರಳಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರದ ಮೂಲಕ ಸುಪ್ರೀಂ ಕೋರ್ಟನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net