ನಶೆ ವಿರುದ್ಧದ ಜಾಗೃತಿಗೆ 50‘ಯೂತ್ ಪೊಲೀಸ್ ಆಫೀಸರ್ಸ್‌’ ಸಜ್ಜು

CTD Police----
Published on

ಚಿತ್ರದುರ್ಗ: ಜಿಲ್ಲೆಯ ಯುವ ಜನರು ಮಾದಕ ವಸ್ತು ಸೇವನೆ ಇತ್ಯಾದಿ ದುಶ್ಚಟಗಳಿಂದ ದೂರವಿರಲು ನಡಿಗೆ, ಓಟ, ಯೋಗ, ವ್ಯಾಯಾಮ, ಧ್ಯಾನ ಮತ್ತಿತರ ಆರೋಗ್ಯಕರ ಚಟುವಟಿಕೆಗಳು ಸಹಕಾರಿ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.

ಪೊಲೀಸ್‌ಇಲಾಖೆ ‘ನಶೆ ಮುಕ್ತ ಚಿತ್ರದುರ್ಗ, ಸಧೃಡ ಚಿತ್ರದುರ್ಗ’ ವಿಶೇಷ ಅಭಿಯಾನದ ಅಂಗವಾಗಿ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದೈಹಿಕ ಸಾಮರ್ಥ್ಯದ ಅಂತಿಮ ಆಯ್ಕೆ ಸ್ಪರ್ಧೆಯಲ್ಲಿ ಮಾತನಾಡಿ, ಪೊಲೀಸ್ ಠಾಣೆ ಮತ್ತು ಉಪವಿಭಾಗಗಳ ಮಟ್ಟದ ಸ್ಪರ್ಧೆಗಳಿಂದ ಜಿಲ್ಲಾಮಟ್ಟದ ಅಂತಿಮ ಹಂತದ ಸ್ವರ್ಧೆಗೆ 427 ಯುವಕ, ಯುವತಿಯರು ಆಯ್ಕೆಯಾಗಿದ್ದರು. ಇವರ ಪೈಕಿ 25 ಯುವಕರು ಹಾಗೂ 25 ಯುವತಿಯರು ಅಂತಿಮ ಹಂತದಲ್ಲಿ ಜಯಶಾಲಿಯಾಗಿದ್ದಾರೆ. ಇವರಿಗೆ ಇಲಾಖೆಯಿಂದ ಪದಕ, ತಲಾ 2500 ರೂ. ನಗದು ಪುರಸ್ಕಾರದೊಂದಿಗೆ ಅವರನ್ನು ಯೂತ್ ಪೊಲೀಸ್ ಆಫೀಸರ್ಸ್‌ ಎಂದು ಗುರುತಿಸಲಾಗಿದೆ. ಇವರು ಇಲಾಖೆಯಿಂದ ಶಾಲಾ, ಕಾಲೇಜು ಮತ್ತಿತರೆಡೆ ಆಯೋಜಿಸುವ ನಶೆ ಮುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಗೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಶ್ಪರಿಣಾಮಗಳೆಡೆ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಜಿಪಂ ಸಿಇಒ ಡಾ. ಎಸ್. ಆಕಾಶ್, ಎಎಸ್‌ಪಿ ಶಿವಕುಮಾರ್, ಎಸಿ ಮಹಮದ್‌ಜಿಲಾನಿ ಖುರೇಷಿ, ಕಾರ್ಯಕ್ರಮ ಪ್ರಾಯೋಜಕತ್ವ ವಹಿಸಿದ್ದ ಖಾಸಗಿ ಕಂಪನಿ ಅಧಿಕಾರಿ ರಮಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net