ನಶಿಸುತ್ತಿರುವ ಜನಪದ ಕಲೆಗಳು

0905klb09
Published on

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಬಯಲಾಟ, ನಾಟಕ, ಗೀಗಿ ಪದ, ಜನಪದ ಕಲೆಗಳು ನಶಿಸುತ್ತಿದ್ದು, ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್​ ಹೇಳಿದರು.

ಕನ್ನಡ ಮತ್ತು ಸಂಸತಿ ಇಲಾಖೆ, ರಂಗಾಯಣ ಕಲಬುರಗಿಯಿಂದ ರ‍್ಪಡಿಸಿದ್ದ ಮಕ್ಕಳ ಹಬ್ಬ- ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಚಿಣ್ಣರ ರಂಗೋತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿ, ರಂಗಾಯಣಕ್ಕೆ ೧.೫ ಕೋಟಿ ಅನುದಾನವನ್ನು ನೀಡುವಂತೆ ಕೆಕೆಆರ್​ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ಗೀಗಿ ಪದ, ಡೊಳ್ಳು ಕುಣಿತ, ತತ್ವ ಪದಗಳು, ಬಯಲಾಟ, ನಾಟಕಗಳನ್ನು ಮರೆತು ಸಿನೆಮಾಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಎಲ್ಲವನ್ನು ಬಿಟ್ಟು ಜನಪದ ಕಲೆಗಳಿಗೆ ಮಹತ್ವ ನೀಡಬೇಕು. ಪ್ರಸ್ತುತ ಪ್ರತಿಭೆಗಳನ್ನು ನಾವೇ ಗುರುತಿಸಿ, ನಾಟಕ, ಬಯಲಾಟ, ಡೊಳ್ಳು ಕುಣಿತ, ಗೀಗಿಪದಗಳನ್ನು ಉತ್ತೇಜಿಸಿ, ಪ್ರೋತ್ಸಾಹಿಸಬೇಕು ಎಂದರು.

ರಂಗಾಯಣ ನರ‍್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಬೇಸಿಗೆ ಶಿಬಿರಗಳಿಂದ ಮಕ್ಕಳಿಗೆ ಜ್ಞಾನ ವೃದ್ಧಿ ಆಗುತ್ತದೆ. ಹೆತ್ತವರು ಮಕ್ಕಳಿಗೆ ಕೇವಲ ಓದು ಎನ್ನದೇ ಕಲೆ, ಸಾಹಿತ್ಯ, ರಂಗಾಸಕ್ತಿಯನ್ನು ಬೆಳೆಸಿ, ಮಕ್ಕಳಲ್ಲಿ ಅಡಗಿದ ಪ್ರತಿಭೆಯನ್ನು ಹೊರತರಬೇಕು ಎಂದು ಹೇಳಿದರು.

ಚಿಣ್ಣರಿಂದ ಕಲಾವೈಭವ: ಶಿಬಿರದ ಮಕ್ಕಳಿಂದ ವಿವಿಧ ಕಲಾ ಪ್ರರ‍್ಶನ ನಡೆಯಿತು. ಸಂಜುಕುಮಾರ ಬರಗಾಲಿ ಡೊಳ್ಳು ಕುಣಿತ, ವಿಶ್ವನಾಥ ತೋಟ್ನಳ್ಳಿ ತಮಟೆ ವಾದನ, ರಾಜ ಮತ್ತು ವೃಕ್ಷ ದೇವತೆ ನಾಟಕ ಪ್ರರ‍್ಶಿಸಲಾಯಿತು.

ಡಿವೈಎಸ್​ಪಿ ಬಸವೇಶ್ವರ ಹೀರಾ ಮಾತನಾಡಿದರು. ಮಕ್ಕಳ ಸಾಹಿತಿ ಎ.ಕೆ.ರಾಮಶೇಶ್ವರ, ಶರಣಬಸವೇಶ್ವರ ಸಂಸ್ಥಾನ ಕರ‍್ಯರ‍್ಶಿ ಬಸವರಾದ ದೇಶಮುಖ, ರಂಗ ಸಮಾಜದ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನರ‍್ದೇಶಕ ದತ್ತಪ್ಪ ಸಾಗನೂರು ಇತರರಿದ್ದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂದೆ ಸ್ವಾಗತಿಸಿದರು. ಪ್ರಕಾಶ ಪೂಜಾರಿ ಮತ್ತು ತಂಡ ಪ್ರರ‍್ಥನಾಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net