ನಶಿಸುತ್ತಿದೆ ಬರವಣಿಗೆ ಕೃಷಿ

sri book
ಶೃಂಗೇರಿ ಉಳುವೆಬೈಲಿನಲ್ಲಿ ಸಾಹಿತಿ ಶಿವಶಂಕರ್ ಅವರ ಬಗೆದಷ್ಟೂ ಮೊಗೆದಷ್ಟೂ ಪುಸ್ತಕವನ್ನು ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಟಿ.ಎಂ.ಕುಮಾರ್ ಬಿಡುಗಡೆಗೊಳಿಸಿದರು. ಎ.ಜಿ.ಸ್ವಾಮಿ, ಶಿವಶಂಕರ್, ಡಾ. ಗಿರೀಶ್, ಜಯಮ್ಮ ಇತರರಿದ್ದರು.
Published on

ಶೃಂಗೇರಿ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಸಂಬಂಧಗಳ ಸಹಿತ ಸ್ಪಷ್ಟವಾದ ವಿಚಾರ ಸರಣಿಗಳು ಸಾಹಿತಿ ಶಿವಶಂಕರ್ ಅವರು ಬರೆದ ‘ಬಗೆದಷ್ಟೂ ಮೊಗೆದಷ್ಟೂ’ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂದು ಬೆಂಗಳೂರಿನ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಟಿ.ಎಂ.ಕುಮಾರ್ ತಿಳಿಸಿದರು.

ಚಿಂತನಾ ಬಳಗ ಹಾಗೂ ಕನ್ನಡ ನುಡಿನಿತ್ಯೋತ್ಸವ ಸಹಯೋಗದಲ್ಲಿ ಉಳುವೆಬೈಲು ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಶಿವಶಂಕರ್ ಅವರ ‘ಬಗೆದಷ್ಟೂ ಮೊಗೆದಷ್ಟೂ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಅಂರ್ತಜಾಲ ಹಾಗೂ ಸಾಮಾಜಿಕ ಮಾಧ್ಯಮಗಳ ಸೆಳೆತಕ್ಕೆ ನಾವು ಒಳಗಾಗಿದ್ದೇವೆ. ಇದರಿಂದ ಬರವಣಿಗೆಯ ಕೃಷಿ ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸಾಹಿತ್ಯದ ಅಧ್ಯಯನದ ಜತೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ವ್ಯಕ್ತಿಯ ಸೃಜನಶೀಲತೆಯ ಪ್ರತೀಕ. ಒಬ್ಬ ವ್ಯಕ್ತಿ ಅನುಭವವನ್ನು ಕ್ರೋಡೀಕರಿಸಿ ವಸ್ತುನಿಷ್ಠ ಬರವಣಿಗೆಯನ್ನು ಓದುಗರಿಗೆ ನೀಡುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಶಿವಶಂಕರ್ ಅವರ ಪ್ರಾಮಾಣಿಕ ಪ್ರಯತ್ನ ಮೆಚ್ಚಲೇ ಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಾಹಿತ್ಯ ಬದುಕಿನ ಅನುಭವ ತೆರೆದಿಡಬೇಕು. ನಮ್ಮೊಳಗಿನ ಸತ್ ಚಿಂತನೆಗಳಿಗೆ ಮೂರ್ತರೂಪ ನೀಡಿದಾಗ ಮಾತ್ರ ಅಂಥ ಪುಸ್ತಕಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಲು ಸಾಧ್ಯ ಎಂದು ಹೇಳಿದರು.

ಬೀರೂರು ಕ್ಷೇತ್ರಶಿಕ್ಷಣಾಧಿಕಾರಿ ರುದ್ರಪ್ಪ, ಹಿರಿಯ ಸಾಹಿತಿ ಪ್ರಭಾಕರ್ ಕಾರಂತ್, ಡಾ. ಗಿರೀಶ್, ಪ್ರಾಧ್ಯಾಪಕ ಎಚ್.ಎ.ಪ್ರಕಾಶ್, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net