ನಶಿಸುತ್ತಿದೆ ಜನಪದ ಕಲೆ

25KMD-1
Published on

ಕೆ.ಎಂ.ದೊಡ್ಡಿ : ಇತ್ತೀಚಿನ ದಿನಗಳಲ್ಲಿ ಜನಪದ ಕಲೆ ನಶಿಸುತ್ತಿದೆ. ಇದಕ್ಕೆ ಕಲೆಯ ಮೇಲಿನ ಜನರ ನಿರಾಸಕ್ತಿಯೇ ಕಾರಣ ಎಂದು ಕೆ.ಹೊನ್ನಲಗೆರೆ ಆರ್.ಕೆ.ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ವಿಷಾದ ವ್ಯಕ್ತಪಡಿಸಿದರು.

ಸಮೀಪದ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಡಾ.ಸುಧಾಮೂರ್ತಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಜನಪದ ಗೀತಾ ಗಾಯನ ಹಾಗೂ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಜನರು ಜನಪದ ಕಲೆಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶಿಸುತ್ತಿದ್ದರು. ಈಗ ಕಲೆಗಳೆಲ್ಲವೂ ಮಾಯವಾಗಿದೆ. ಆದ್ದರಿಂದ ಯುವಜನರು ಜನಪದ ಕಲೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ಅವುಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ, ಜಿಪಂ ಮಾಜಿ ಸದಸ್ಯ ಸಾದೋಳಲು ಕೃಷ್ಣೇಗೌಡ, ಸುಧಾಮೂರ್ತಿ ಅಭಿಮಾನಿ ಸೇವಾ ಬಳಗದ ಅಧ್ಯಕ್ಷ ವಸಂತಮ್ಮ ವೆಂಕಟಾಚಲಯ್ಯ, ವಿಜಯಲಕ್ಷ್ಮೀ ರಾಜು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net