ನವೆಂಬರ್​ನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ

Children's Literature Conference in November
Published on

ವಿಜಯಪುರ: ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ನವೆಂಬರ್​ನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.

ಸಮ್ಮೇಳನ ಅಂಗವಾಗಿ ನಗರದ ಸ್ಟೇಷನ್​ ರಸ್ತೆಯ ಸರ್ಕಾರಿ ಮೆಟ್ರಿಕ್​ ಪೂರ್ವ ವಸತಿ ನಿಲಯದಲ್ಲಿ ಜಿಲ್ಲೆಯ ಎಲ್ಲ ವಸತಿ ಶಾಲೆ ಪ್ರಾಚಾರ್ಯರು ಹಾಗೂ ವಸತಿ ನಿಲಯದ ಮೇಲ್ವಿಚಾರಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಪ್ರೋತ್ಸಾಹಿಸಲು ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲೆ ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ನವೆಂಬರ್​ ಕೊನೇ ವಾರದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸೋಣ. ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ನೀಡೋಣ. ಜಿಲ್ಲಾಡಳಿತ ಹಾಗೂ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಸೇರಿ ಮತ್ತಿತರ ಜನಪ್ರತಿನಿಧಿಗಳು ಸೇರಿ ಈ ಸಮ್ಮೇಳನ ಆಯೋಜಿಸುತ್ತಿದ್ದೇವೆ ಎಂದರು.

ಪ್ರಾಚಾರ್ಯ ಅಹಮ್ಮದ್​ ಪಟೇಲ ಬಾಗವಾನ, ಜಿಂ.ಎಂ. ಗುಳಗಿ, ಪ್ರಾಚಾರ್ಯ ಗಂಗಾಧರ ಅಂಕಲಗಿ, ದುಂಡಪ್ಪ ಮೋಟೆ, ಡಿ.ಎಂ. ಚಲವಾದಿ. ಎಸ್​.ಸಿ. ವಗ್ಗಿ, ಶ್ರೀಶೈಲ ಕೊರಳ್ಳಿ, ಕರುಣಾಮಯಿ ದುಮ್ಮವಾಡ, ಬೋರಮ್ಮ ಬಿರಾದಾರ, ಮಲ್ಲಿಕಾರ್ಜುನ ಹಟ್ಟಿ, ರವೀಂದ್ರ ಬಂಥನಾಳ, ಪ್ರಭಾಕರ ಪಾಟೀಲ, ಶಬನಮ ಅತ್ತಾರ, ಗೋವಿಂದ ವಾಲಿಕಾರ, ಲಕ್ಷಿ$್ಮ ಪಲ್ಲೇದ, ವಿಜಯ ಪವಾರ, ನೀಲಪ್ಪ ಕೊಡಬಾಗಿ, ದಯಾನಂದ ಹೀರೆಮಠ, ಚಂದ್ರಶೇಖರ ಸಜ್ಜನ, ಡಿ.ಎನ್​. ವಾಡಜೆ ಮತ್ತಿತರರಿದ್ದರು.

ವಿಜಯಪುರದ ಸರ್ಕಾರಿ ಮೆಟ್ರಿಕ್​ ಪೂರ್ವ ವಸತಿ ನಿಲಯದಲ್ಲಿ ನಡೆದ ಸಭೆಯಲ್ಲಿ ಹಾಸಿಂಪೀರ ವಾಲಿಕಾರ ಮಾತನಾಡಿದರು. ಮಹೇಶ ಪೋತದಾರ, ಅಹಮ್ಮದ ಪಟೇಲ ಬಾಗವಾನ, ಜಿಂ.ಎಂ. ಗುಳಗಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net