ನವೆಂಬರ್‌ನಲ್ಲಿ ಗ್ರಾಮಸಭೆ

ldh gp meeting
ನಂದಿಬಟ್ಟಲು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಮಾತನಾಡಿದರು. ಲಕ್ಷ್ಮಮ್ಮ, ಎನ್.ಎ,ಕೃಷ್ಣನಾಯ್ಕ, ಎನ್.ರಮೇಶ್, ಅನ್ನಪೂರ್ಣ ಇತರರಿದ್ದರು.
Published on

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿ ಮುಂದೂಡಿದ ಗ್ರಾಮಸಭೆಯನ್ನು ದೀಪಾವಳಿ ಹಬ್ಬದ ನಂತರ ನಡೆಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಹೇಳಿದರು.

ಮಂಗಳವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವಾರದ ಹಿಂದೆ ಆಯೋಜಿಸಿದ್ದ ಗ್ರಾಪಂ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿದ್ದರಿಂದ ಸಭೆ ಮುಂದೂಡಲಾಗಿದೆ. ಹೀಗಾಗಿ ಹಬ್ಬದ ನಂತರ ಗ್ರಾಮಸಭೆ ನಡೆಸೋಣ ಎಂದರು.

ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಗ್ರಾಪಂ ಸದಸ್ಯರೆಲ್ಲರೂ ನಿಗಾ ವಹಿಸಿ ಆಯಾ ಗ್ರಾಮಗಳ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು ಎಂದು ತಿಳಿಸಿದರು.

ಪಿಡಿಒ ಎನ್.ಎಸ್.ನಾಗರಾಜಪ್ಪ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಎನ್.ಜೆ.ಭದ್ರೇಗೌಡ, ಎನ್.ಎ,ಕೃಷ್ಣನಾಯ್ಕ, ಎನ್.ರಮೇಶ್, ಅನ್ನಪೂರ್ಣ ಮಂಜುನಾಥ್, ಲತಾ ಸುಬ್ಬಯ್ಯ, ವಾಣಿ ರಾಜೇಶ್, ಸೌಮ್ಯಾ ಪುಷ್ಪಾಧರ್, ತುಂಗಾಬಾಯಿ, ಸಿಬ್ಬಂದಿ ಎನ್.ರವಿ, ಆರ್.ರಾಜೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net