ನವೀಕರಣ 10 ವರ್ಷಕ್ಕೆ ನಿಗದಿಗೊಳಿಸಿ

CLK SABHE 13
Published on

ಚಳ್ಳಕೆರೆ: ಸರ್ಕಾರದ ಆದೇಶದಂತೆ ಖಾಸಗಿ ಅನುದಾನ ರಹಿತ ಹಾಗೂ ಅನುದಾನಿತ ಶಾಲೆಗಳ ಪರವಾನಗಿಯನ್ನು 10 ವರ್ಷಗಳ ಅವಧಿಗೆ ನವೀಕರಣ ಮಾಡಲು ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು ಎಂದು ರುಪ್ಸ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಖಾಸಗಿ ಶಾಲಾ ಅನುದಾನರಹಿತ ಆಡಳಿತ ಮಂಡಳಿಗಳ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಮಾತನಾಡಿದರು.

1994ರವರೆಗೆ ಅನುದಾನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಇದುವರೆಗೂ ನೇಮಕ ಮಾಡಿಲ್ಲ. ಖಾಸಗಿ ಶಾಲೆಗಳ ಬಲವರ್ಧನೆ ಕುಂಠಿತಗೊಳಿಸುವ ಹುನ್ನಾರ ನಡೆದಿದೆ. ಆರ್‌ಟಿಇ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಆರಂಭದಲ್ಲಿ ಇದರ ಪ್ರಯೋಜನದಡಿ 1.8 ಲಕ್ಷ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶವಿತ್ತು. ಶೈಕ್ಷಣಿಕ ವರ್ಷದ ಲೆಕ್ಕದಂತೆ ಆರ್‌ಟಿಇ ವಿದ್ಯಾರ್ಥಿಗಳ ವೇತನ ಬಿಡುಗಡೆ ಮಾಡದ ಕಾರಣ ಬಡಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಆರ್‌ಟಿಇ ವಿದ್ಯಾರ್ಥಿಗಳ ದಾಖಲಾತಿ 5 ಸಾವಿರಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net