ನವಿಲೇ ಗ್ರಾಮದಲ್ಲಿ ಪಶು ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆ

IMG_20230823_160304
ನವಿಲೇ ಗ್ರಾಮದಲ್ಲಿ ಪಶು ಚಿಕಿತ್ಸಾ ಆಸ್ಪತ್ರೆಯ ನೂತನ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ನಾಗರಾಜ್, ಜಯದೇವಪ್ಪ, ರವೀಶ್, ನಂಜುಂಡಸ್ವಾಮಿ ಇತರರು ಇದ್ದರು.
Published on

ಬಾಗೂರು: ಪುರಾಣ ಪ್ರಸಿದ್ಧ ನವಿಲೇ ಶ್ರೀ ನಾಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ನವಿಲೇ ಗ್ರಾಮದಲ್ಲಿ ಬುಧವಾರ 32 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ಚಿಕಿತ್ಸಾ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, 2 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಪ್ರಾರಂಭಿಸಲಾಗಿದೆ. ಅಲ್ಲದೆ ನಾಗೇಶ್ವರಸ್ವಾಮಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಬಸವರಾಜ್, ಉಪಾಧ್ಯಕ್ಷ ಎನ್.ಸಿ.ರವೀಶ್, ಮುಖಂಡರಾದ ಬಸವರಾಜ್, ಚಂದ್ರಪ್ಪ, ಎನ್.ಬಿ.ನಾಗರಾಜ್, ರಂಗೇಗೌಡ, ಜಯದೇವಪ್ಪ, ಚವೆನಹಳ್ಳಿ ರಾಮಣ್ಣ, ದಿನೇಶ್, ನಂಜುಂಡಪ್ಪ, ಮೆಡಿಕಲ್ ಶಿವರಾಜ್, ನವೀನ್, ರಾಜು, ದೀಪು, ಪವಿತ್ರ ಪರಮೇಶ್, ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net