ನವಸಮಾಜ ನಿರ್ಮಾಣಕ್ಕೆ ಸಾಂಸ್ಕೃತಿಕ ವೀರನಂತೆ ಕೆಲಸ

11 krp 01
Published on

ಕೆ.ಆರ್.ಪೇಟೆ : ಸಮಾಜದ ಜನರಲ್ಲಿದ್ದ ಮೂಢನಂಬಿಕೆ, ಕೆಟ್ಟ ಸಂಪ್ರದಾಯಗಳಿಗೆ ಕಟ್ಟುಬೀಳದೆ ನವ ಸಮಾಜದ ನಿರ್ಮಾಣ ಮಾಡುವಲ್ಲಿ ಕನಕದಾಸರು ಸಾಂಸ್ಕೃತಿಕ ವೀರನಂತೆ ಕೆಲಸ ನಿರ್ವಹಿಸಿದ್ದಾರೆ ಎಂದು ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಸಮಾಜವನ್ನು ಸುಧಾರಣೆ ಮಾಡುವುದು ಸುಲಭದ ಕೆಲಸ ಅಲ್ಲ. 15ನೇ ಶತಮಾನದಲ್ಲೇ ಮುಂದಿನ ತಲೆಮಾರಿನ ಜನರು ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಬೇಕೆಂಬ ಆಶಯ ಹೊಂದಿದ್ದ ಕನಕದಾಸರು ಕೀರ್ತನೆಗಳ ಮೂಲಕ ದಾಸಶ್ರೇಷ್ಠರಾಗಿದ್ದಾರೆ. ಅವರ ದಾಸ ಸಾಹಿತ್ಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಪುರಸಭಾ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಗಾಯತ್ರಮ್ಮ, ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಎಂ.ಜೆ.ಶಶಿಧರ, ತಾಪಂ ಇಒ ಸತೀಶ್, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ತಾಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಚಂದ್ರೇಗೌಡ, ಡಾ.ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net