

ಹೂವಿನಹಡಗಲಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಮಳೆ ಸುರಿಯಿತು. ನವಲಿ ಗ್ರಾಮದಲ್ಲಿ ಕಮ್ಮಾರ ಶಂಕ್ರಪ್ಪ ಅವರ ಮನೆಯ ಛಾವಣಿ ಕುಸಿದಿದೆ.
ಶನಿವಾರ ವಾರದ ಸಂತೆಗೆ ಬಂದಿದ್ದ ಜನರು ಮಳೆಯಿಂದಾಗಿ ತರಕಾರಿ ತೆಗೆದುಕೊಳ್ಳಲು ಪರದಾಡಿದರು. ಮಾರಾಟಗಾರರು ಕೂಡ ತರಕಾರಿ ಸರಂಕ್ಷಿಸಲು ಪರದಾಡಿದರು. ವಿದ್ಯಾರ್ಥಿಗಳು ಕಾಲೇಜುಗಳಿಂದ ಮನೆಗೆ ಮಳೆಯಲ್ಲೇ ತೆರಳಿದರು. ಬೆಳಗ್ಗೆ ಬಿಸಿಲಿದ್ದರೂ ಮಧ್ಯಾಹ್ನ ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ಉತ್ತಮ ಮಳೆ ಸುರಿಯಿತು.